ದಕ್ಷಿಣ ಕನ್ನಡದಲ್ಲಿ ಮೀನು ಕೃಷಿಕರ ದಿನಾಚರಣೆ: ಸುಸ್ಥಿರ ಮೀನು ಕೃಷಿಯ ತರಬೇತಿ ಕಾರ್ಯಕ್ರಮ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಪಂಚಾಯತ್ ಸಭಾಭವನದಲ್ಲಿ, ಜಿಲ್ಲಾ ಮೀನುಗಾರಿಕೆ ಇಲಾಖೆಯ ವತಿಯಿಂದ ಮೀನು ಕೃಷಿಯ ಮಹತ್ವವನ್ನು ಸಾರುವ ‘ಮೀನು ಕೃಷಿಕರ ದಿನಾಚರಣೆ’ಯನ್ನು ಜು.10ರಂದು ಆಚರಿಸಿದರು.


ಮಂಗಳೂರಿನ ಮೀನುಗಾರಿಕೆ ಉಪ ನಿರ್ದೇಶಕ ದಿಲೀಪ್ ಕುಮಾರ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲೆಯ ಆರ್ಥಿಕತೆಯಲ್ಲಿ ಮೀನು ಕೃಷಿಯ ಪಾತ್ರ, ಮೀನು ಕೃಷಿಕರ ಸಬಲೀಕರಣಕ್ಕೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಇಲಾಖೆಯ ಬದ್ಧತೆ, ಕೃಷಿಕರು ನೂತನ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ಪಾದಕತೆಯ ಮಾಹಿತಿ ನೀಡಿದರು.

ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ. ಜೆ. ರಮೇಶ್ ‘ಸಮಗ್ರ ಒಳನಾಡು ಮೀನು ಕೃಷಿ’ ಕುರಿತು ವಿಸ್ತೃತ ಮಾಹಿತಿ ನೀಡಿ ಮಣ್ಣು, ನೀರು, ಮತ್ತು ಪರಿಸರಕ್ಕೆ ಹಾನಿಯಾಗದಂತೆ, ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಮೀನು ಕೃಷಿಯನ್ನು ಹೇಗೆ ಲಾಭದಾಯಕವಾಗಿ ಮಾಡಬಹುದು ಎಂಬುದರ ಬಗ್ಗೆ ಅವರು ವಿವರಿಸಿದರು. ಸಣ್ಣ ಹಿಡುವಳಿದಾರರೂ ಸಹ ಮೀನು ಕೃಷಿಯಿಂದ ಉತ್ತಮ ಆದಾಯ ಗಳಿಸಲು ಇರುವ ಅವಕಾಶಗಳನ್ನು ಅವರು ತಿಳಿಸಿದರು.

MPEDA (Marine Products Export Development Authority) ಸಹಾಯಕ ನಿರ್ದೇಶಕ ಸುಬ್ರಮಣ್ಯಂ ‘ಮೀನು ಕೃಷಿಯಲ್ಲಿ ಪ್ರತಿಜೀವಕ (Antibiotic) ಮತ್ತು ಕೀಟನಾಶಕಗಳ (Pesticides) ದುಷ್ಪರಿಣಾಮಗಳು’ ಹಾಗೂ ಅವುಗಳನ್ನು ತಡೆಗಟ್ಟುವ ಮಾರ್ಗೋಪಾಯಗಳ ಬಗ್ಗೆ ಜಾಗೃತಿ ಮೂಡಿಸಿದರು. ಗುಣಮಟ್ಟದ, ರಫ್ತು ಯೋಗ್ಯ ಮೀನು ಉತ್ಪಾದನೆಗೆ ಅನುಸರಿಸಬೇಕಾದ ಜೈವಿಕ ಸುರಕ್ಷತಾ ಕ್ರಮಗಳ ಬಗ್ಗೆ ಅವರು ಮಾರ್ಗದರ್ಶನ ನೀಡಿದರು.


ಮೀನುಗಾರಿಕೆ ಸಹಾಯಕ ನಿರ್ದೇಶಕಿ ಮಂಜುಳಾಶ್ರೀ ಶೆಣೈ ಕಾರ್ಯಕ್ರಮವನ್ನು ಆಯೋಜಿಸಿ, ವಂದಿಸಿದರು.

LEAVE A REPLY

Please enter your comment!
Please enter your name here