ಇಂದಿನ ಕಾರ್ಯಕ್ರಮ (11-07-2025)

0

ಪುತ್ತೂರು ಜಿ. ಎಲ್. ವನ್ ಮಾಲ್‌ನಲ್ಲಿರುವ ಭಾರತ್ ಸಿನೆಮಾಸ್‌ನಲ್ಲಿ `ಧರ್ಮ ಚಾವಡಿ’ ಸಿನಿಮಾ ಬಿಡುಗಡೆ
ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಮೃದ್ಧಿ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ವಾರ್ಷಿಕ ಮಹಾಸಭೆ
ತಿಂಗಳಾಡಿ ದೇವಗಿರಿ ಶ್ರೀ ಕ್ಷೇತ್ರ, ಶ್ರೀ ದೇವತಾ ಭಜನಾ ಮಂದಿರದಲ್ಲಿ ಬೆಳಿಗ್ಗೆ ೮.೩೦ರಿಂದ ದ್ವಾದಶ ನಾಳಿಕೇರ ಗಣಪತಿ ಹವನ, ದೈವಗಳಿಗೆ ತಂಬಿಲ, ಕಲ್ಪೋಕ್ತ ಗಣಪತಿ ಪೂಜೆ, ವಾಗ್ದೇವಿ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ೫.೩೦ರಿಂದ ದುರ್ಗಾಪೂಜೆ, ಭಜನೆ, ಶ್ರೀ ಸತ್ಯನಾರಾಯಣ ಪೂಜೆ
ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಬೆಳಿಗ್ಗೆ ೬ರಿಂದ ಗಣಪತಿ ಹೋಮ, ಭಜನಾ ಸಂಕೀರ್ತನೆ, ೭ರಿಂದ ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ವಾಯನ ದಾನ, ಶ್ರೀಗುರು ಪೂಜೆ, ಬಾಲಭೋಜನ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ೧೧.೩೦ಕ್ಕೆ ಸಾಮೂಹಿಕ ಕುಂಕುಮಾರ್ಚನೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೬.೩೦ರಿಂದ ಶ್ರೀ ಲಕ್ಷ್ಮೀಪೂಜೆ, ಮಹಾಪೂಜೆ
ಶುಭವಿವಾಹ
ಪುತ್ತೂರು ಕಲ್ಲೇಗ ಭಾರತ್‌ಮಾತಾ ಸಮುದಾಯ ಭವನದಲ್ಲಿ ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಮರಕ್ಕೂರು ಪಂಜಿಗ ಬಾಬು ಮೂಲ್ಯರ ಪುತ್ರ ತೇಜಾಕ್ಷ ಮತ್ತು ಮಂಜೇಶ್ವರ ತಾಲೂಕು ಬಾಯಾರು ಗ್ರಾಮದ ಬಾಲಡ್ಕ ಪಕೀರ ಬಂಜನ್‌ರವರ ಪುತ್ರಿ ಶಶಿಕಲಾರವರ ವಿವಾಹ
ಉತ್ತರಕ್ರಿಯೆ
ಉಪ್ಪಿನಂಗಡಿ ನೇತ್ರಾವತಿ ಸಭಾಭವನದಲ್ಲಿ ಮಧ್ಯಾಹ್ನ ವಿಟ್ಲಪಡ್ನೂರು ಗ್ರಾಮದ ಎರ್ಮೆನಿಲೆ ಎಂ. ಬಾಲಕೃಷ್ಣ ಶೆಟ್ಟಿಯವರ ಉತ್ತರಕ್ರಿಯೆ

LEAVE A REPLY

Please enter your comment!
Please enter your name here