ಪುತ್ತೂರು: ತಾಲೂಕು ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಶ್ರೀಗೌರಿ ಮಹಿಳಾ ಮಂಡಲ ಸರ್ವೆ ಇದರ ವತಿಯಿಂದ ನಡೆಯುವ 4ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಕಲ್ಲಮ ಶ್ರೀ ರಾಘವೇಂದ್ರ ಮಠದಲ್ಲಿ ಬಿಡುಗಡೆ ಮಾಡಲಾಯಿತು.
ಮಠದ ಆಡಳಿತ ಮಂಡಳಿಯ ವ್ಯವಸ್ಥಾಪಕರಾದ ಡಾ. ಸೀತಾರಾಮ ಭಟ್ ಕಲ್ಲಮ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅನುರಾಧ ಭಟ್ ಕಲ್ಲಮ ಅವರು ರಿಬ್ಬನ್ ಬಿಡಿಸುವ ಮೂಲಕ ಪತ್ರಿಕೆಯನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು.
ಮುಂಡೂರು ಗ್ರಾಮ ಪಂಚಾಯತ್ ಸದಸ್ಯರಾದ ಕಮಲೇಶ್ ಸರ್ವೇದೋಳಗುತ್ತು ಶುಭ ಹಾರೈಸಿದರು. ಮಹಿಳಾ ಮಂಡಲದ ಗೌರವಾಧ್ಯಕ್ಷರಾದ ರತ್ನಾವತಿ ಸರ್ವೆದೋಳಗುತ್ತು, ಗೌರವ ಸಲಹೆಗಾರರಾದ ವಿಜಯಲಕ್ಷ್ಮಿ ಶಂಕರನಾರಾಯಣ ಭಟ್, ಗೌರವಾಧ್ಯಕ್ಷೆಯಾಗಿರುವ ಮೋಹಿನಿ ಭಕ್ತಕೋಡಿ, ವಸಂತಿ ಭಕ್ತಕೋಡಿ, ಶ್ರೀ ಷಣ್ಮುಖ ಯುವಕ ಮಂಡಲದ ಗೌರವ ಸಲಹೆಗಾರರಾದ ಶಶಿಧರ್ ಸರ್ವೆದೋಳಗುತ್ತು , ಸದಸ್ಯರಾದ ಜಯರಾಜ್ ಸುವರ್ಣ, ಅಶೋಕ್ ಸರ್ವೆದೋಳಗುತ್ತು, ನಾಗೇಶ್ ಪಟ್ಟೆಮಜಲು, ಮನೋಜ್ ಸುವರ್ಣ ಮತ್ತು ಮಹಿಳಾ ಮಂಡಲದ ಸದಸ್ಯರುಗಳು ಉಪಸ್ಥಿತರಿದ್ದರು.