ಪುತ್ತೂರು: ಕೃಷ್ಣವಾಣಿ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾದ ನಡುಬೈಲ್ ಜಗದೀಶ್ ಅಮೀನ್ ನಿರ್ಮಾಣದ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದ “ಧರ್ಮ ಚಾವಡಿ’ ತುಳು ಚಿತ್ರ ಜು.11 ರಂದು ಕರಾವಳಿಯಾದ್ಯಂತ ತೆರೆಕಂಡಿತು. ಪುತ್ತೂರಿನಲ್ಲಿ ಜಿ.ಎಲ್ ವನ್ ಮಾಲ್ ನಲ್ಲಿರುವ ಭಾರತ್ ಸಿನೆಮಾಸ್‌ನಲ್ಲಿ ಚಿತ್ರ ಪ್ರರ್ದಶನ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಚಿತ್ರದ ಪ್ರಥಮ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನನಗೆ ದೈವದ ಮೇಲೆ ಅಪಾರ ನಂಬಿಕೆ ಇದೆ. ಇದಕ್ಕೆ ಪೂರಕವಾಗಿ ಮೂಡಿ ಬಂದಿರುವ ಈ ಚಿತ್ರ ತುಳು ಭಾಷೆಯನ್ನು ಉಳಿಸುವ ಕೆಲಸ ಮಾಡುತ್ತಿದೆ. ಮನೋರಂಜನೆ ನೀಡುವ ಭಾವನೆಗಿಂತ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಈ ಚಿತ್ರದ ಮೂಲಕ ಆಗಿದೆ. ಸ್ವಾಮಿ ವಿವೇಕಾನಂದ ಮಾತಿನಂತೆ ಚಿತ್ರ ಯುವಕರ ತಂಡದ ಕೆಲಸಕ್ಕೆ ಮಹಾಲಿಂಗೇಶ್ವರ ದೇವರ ಆಶೀರ್ವಾದ ಸದಾ ಇರಲಿ ಎಂದ ಅವರು ಶ್ರೀ ದೇವರ ಪ್ರಸಾದವನ್ನು ಚಿತ್ರ ತಂಡಕ್ಕೆ ನೀಡಿದರು.
ವಿಜಯ ಸಾಮ್ರಾಟ್ ಸ್ಥಾಪಕ ಸಹಜ್ ರೈ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಚಿತ್ರದ ಪ್ರಮುಖ ಪಾತ್ರ ವಹಿಸಿದ ಸುರೇಶ್ ರೈ, ಅಕ್ಷಯ್ ಕಾಲೇಜು ಅಧ್ಯಕ್ಷ ಜಯಂತ ನಡುಬೈಲು ಶುಭ ಹಾರೈಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ ಕೃಷ್ಣಪ್ರಸಾದ್ ಆಳ್ವ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ದಯಾನಂದ ರೈ ಬೆಟ್ಟಂಪಾಡಿ, ಚಿತ್ರದ ನಿರ್ಮಾಪಕ ಜಗದೀಶ್ ಅಮೀನ್, ಚಲನ ಚಿತ್ರನಟ ಸುಂದರ ರೈ ಮಂದಾರ, ದಯಾನಂದ ರೈ , ಮಹೇಶ್ಚಂದ್ರ ಸಾಲಿಯಾನ್, ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಗೋಕುಲ್ ನಾಥ್, ಸಂಗೀತ ನಿರ್ದೇಶಕ ಪ್ರಸಾದ್ ಕೆ ಶೆಟ್ಟಿ, ಛಾಯಾಗ್ರಹಣ ಮಾಡಿದ ಅರುಣ್ ರೈ ಪುತ್ತೂರು, ಚಿತ್ರ ಕಥೆ ಬರೆದ ರಜಾಕ್ ಪುತ್ತೂರು, ಚಿತ್ರದ ನಟ ಕಲಾವಿದ ಸುಂದರ್ ರೈ ಮಂದಾರ, ವಿಜಯ, ಭಾರತ್ ಸಿನೆಮಾಸ್ ಮ್ಯಾನೇಜರ್ ಜಯರಾಮ್ ರೈ, ನಾಗೇಶ್ ಟಿ ಎಸ್, ಜೇಸಿಐ ಮೋಹನ್, ಶಿಕ್ಷಕ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು. ಶರತ್ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಚಿತ್ರದ ಹಂಚಿಕೆದಾರ ಬಾಲಕೃಷ್ಣ ರೈ ಕುಕ್ಕಾಡಿ ಅತಿಥಿಗಳನ್ನು ಗೌರವಿಸಿದರು.