ಪುತ್ತೂರು: ಗುರು ಪೂರ್ಣಿಮೆ ದಿನದಂದು ಮುಕ್ರಂಪಾಡಿಯ 153ನೇ ಬೂತ್ ನಲ್ಲಿ ಮುಕ್ರಂಪಾಡಿ ನಿವಾಸಿ ನಿವೃತ್ತ ಶಿಕ್ಷಕ ಹಾಗೂ ಮಾರ್ಗದರ್ಶಕರಾದ ಹರಿಣಾಕ್ಷ ಮಾಸ್ಟರ್ ಇವರಿಗೆ
ಗುರು ಪೂರ್ಣಿಮೆಯ ದಿನದಂದು ಸನ್ಮಾನಿಸಲಾಯಿತು.
ಅವರ ಶೈಕ್ಷಣಿಕ ಸಾಧನೆ ,ಹಾಗೂ ಸಮಾಜಕ್ಕೆ ನೀಡಿರುವ ಸೇವೆಯನ್ನು ಗೌರವಿಸಿ, ಸನ್ಮಾನ ಕಾರ್ಯ ನಡೆಯಿತು.
ಈ ಕಾರ್ಯಕ್ರಮದಲ್ಲಿ 153ನೇ ಬೂತ್ ಅಧ್ಯಕ್ಷರಾದ ಧನಂಜಯ ಆಚಾರ್ಯ, ಕಾರ್ಯದರ್ಶಿ ಶೈಲೇಶ್ ನೈತಾಡಿ, ನಗರಸಭಾ ಸದಸ್ಯೆ ಇಂದಿರಾ ಪಿ ಆಚಾರ್ಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಕುಮಾರ್ ಮಾರ್ತಾ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷರಾದ ಮಹಮ್ಮದ್ ರಫೀಕ್ ದರ್ಬೆ, ದರ್ಬೆ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಮುಕ್ರಂಪಾಡಿ, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಜಯಶ್ರೀ, 117ನೇ ವಾರ್ಡಿನ ಕಾರ್ಯದರ್ಶಿ ಉಮೇಶ್ ಎಂ ಹಾಗೂ ವಾರ್ಡಿನ ಹಿರಿಯ ಸದಸ್ಯರುಗಳಾದ ಶ್ರೀಪಾದ, ಶಶಿಕಲಾ, ಪದ್ಮನಾಭ ನಾಯಕ್, ಕಿಶೋರ್ ಕುಮಾರ್, ಗುರುರಾಜ್ ಆಚಾರ್ಯ, ಇವರುಗಳು ಭಾಗವಹಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಮ್ಮದ್ ರಫೀಕ್ ದರ್ಬೆ ಇವರು ಗುರು ಪೂರ್ಣಿಮೆಯ ದಿನದ ಮಹತ್ವದ ಬಗ್ಗೆ ವಿವರಿಸಿದರು. ಕೊನೆಯಲ್ಲಿ ಹಿರಿಯರಾದ ಶ್ರೀಪಾದ ಧನ್ಯವಾದ ಸಮರ್ಪಿಸಿದರು.
