ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಪದಗ್ರಹಣ

0

ಎಲ್ಲರೂ ಜೊತೆಯಾಗಿ ಕೆಲಸ ಮಾಡಿದ ಕಾರಣ ಪುತ್ತೂರಿನಲ್ಲಿ ಕಾಂಗ್ರೆಸ್ ಗೆದ್ದಿದೆ: ಅಶೋಕ್ ರೈ

ಪುತ್ತೂರು: ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ, ಹಗಲು ರಾತ್ರಿ ಕೆಲಸ ಮಾಡಿದ ಕಾರಣ ಪುತ್ತೂರಲ್ಲಿ ಕಾಂಗ್ರೆಸ್ ಗೆದ್ದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೂ ಆಡಳಿತಕ್ಕೆ ಬಂದಿದೆ. ಪಕ್ಷದ ವಿಚಾರ ಬಂದಾಗ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.


ತಮ್ಮ ವೈಯುಕ್ತಿಕ ವಿಚಾರಕ್ಕೆ ಪಕ್ಷವನ್ನು ಯಾರೂ ಬಲಿ ಕೊಡಬಾರದು, ಪಕ್ಷಕ್ಕೆ ಡ್ಯಾಮೇಜ್ ಹಾಕುವ ಕೆಲಸವನ್ನು ಯಾರೂ ಮಾಡಬಾರದು. ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ಕಾಂಗ್ರೆಸ್ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಮಸೀದಿ, ಮದ್ರಸ, ರಸ್ತೆ ಸೇರಿದಂತೆ ಇತರೆ ವಿಚಾರಗಳಿಗೂ ಹೆಚ್ಚಿನ‌ ಅನುದಾನ ನೀಡುತ್ತಿದೆ ಎಂದು ಹೇಳಿದರು. ಪಕ್ಷದ ಕಾರ್ಯಕ್ರಮಕ್ಕೆ ಹೆಚ್ಚಿನ ಕಾರ್ಯಕರ್ತರು ಭಾಗವಹಿಸಬೇಕು ಎಂದು‌ ಮನವಿ ಮಾಡಿದರು.

ಅನ್ವರ್ ಖಾಸಿಂ ಗುಡ್ ವರ್ಕರ್
ಪುಡಾ ಸದಸ್ಯರಾದ ಅನ್ವರ್ ಖಾಸಿಂ ಅವರು ಉತ್ತಮ ಕೆಲಸಗಾರ, ಪುಡಾದ ಯಾವುದೇ ಸಮಸ್ಯೆ ಇದ್ದರೂ ಅದರ‌ ಪರಿಹಾರಕ್ಕಾಗಿ ವಿಧಾನ ಸೌಧಕ್ಕೂ ತೆರಳಿ ಪರಿಹಾರ ಕಂಡುಕೊಳ್ಳುತ್ತಾರೆ. ಇಂತಹ ಕಾರ್ಯಕರ್ತರು ಇದ್ದರೆ ಪಕ್ಷ ಇನ್ನಷ್ಟು ಬೆಳೆಯುತ್ತದೆ.‌ ಅನ್ವರ್ ಖಾಸಿಂ ಎಲ್ಲಾ ಕಾರ್ಯಕರ್ತರಿಗೂ ಮಾದರಿಯಾಗಿದ್ದಾರೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಯಾವುದೇ ಸಮಸ್ಯೆ ಇದ್ದಲ್ಲಿ ಕಚೇರಿಗೆ ಬನ್ನಿ
ಕಾರ್ಯಕರ್ತರಿಗೆ ಯಾವುದೇ ಸಮಸ್ಯೆ ಉಂಟಾದಲ್ಲಿ ಕಚೇರಿ ಬಂದು ತಿಳಿಸಿ ಅಥವಾ ನನ್ನ ಗಮನಕ್ಕೆ ತರಬೇಕು. ಕೆಲಸ ಆಗಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಯಾವ ಕಾರ್ಯಕರ್ತರೂ ಪಕ್ಷಕ್ಕೆ ಡ್ಯಾಮೇಜ್ ಮಾಡಬಾರದು ಎಂದು ಹೇಳಿದರು.

ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಮ್ಮಿ ಅಲ್ಲ ಒರಿಜಿನಲ್

ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಣ ಯು ಟಿ ತೌಸೀಫ್ ಒಳ್ಳೆಯ ಯುವ ಕಾರ್ಯಕರ್ತ. ಅವರನ್ನು ಅಧ್ಯಕ್ಷ ಮಾಡಿದ್ದು ನಾನೇ, ಆದರೆ ಕೆಲವರು ಅವರನ್ನು ಡಮ್ಮಿ ಎಂದು ಹೇಳುತ್ತಿದ್ದಾರೆ. ಅವರು ಡಮ್ಮಿಯಲ್ಲ ಅಧಿಕೃತ ಅಧ್ಯಕ್ಷ, ಅವರ ನೇಮಕಾತಿ ಪತ್ರ ಕೆಲವೇ ದಿನದಲ್ಲಿ ಬರಲಿದೆ ಇದರಲ್ಲಿ ಯಾರಿಗೂ ಗೊಂದಲ ಬೇಡ ಎಂದು ಶಾಸಕರು ಹೇಳಿದರು.


ವೇದಿಕೆಯಲ್ಲಿ ಬ್ಲಾಕ್ ಅಧ್ಯಕ್ಣ ಕೆ ಪಿ ಆಳ್ವ, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಸಾಹುಲ್ ಹಮೀದ್, ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಕಾರ್ಯದರ್ಶಿ ನಝೀರ್ ಮಠ, ನೂತನ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಡಾ.ರಾಜಾರಾಂ ಕೆ ಬಿ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ಸೇವಾದಳದ ಜೋಕಿಂ ಡಿಸೋಜಾ, ಪುಡಾ ಸದಸ್ಯ ಲ್ಯಾನ್ಸಿ ಮಸ್ಕರೇನಸ್, ಮಾಜಿ ಅಧ್ಯಕ್ಣ ಶಕೂರ್ ಹಾಜಿ, ವಿಟ್ಲ ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ನಾಸಿರ್ ಕೋಲ್ಪೆ ಸಹಿತ ಹಲವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here