




ಪುತ್ತೂರು: ಭಗವಾನ್ ಶ್ರೀರಾಮಚಂದ್ರ ಸಪರಿವಾರ ಸಹಿತ ಪ್ರತಿಷ್ಠಾಪನೆಗೊಂಡು ಭಕ್ತರಿಗೆ ದರ್ಶನ ನೀಡುತ್ತಿರುವ ಅತ್ಯಂತ ಕಾರಣಿಕತೆಯ ಕ್ಷೇತ್ರವಾಗಿರುವ ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯ ಶ್ರೀ ರಾಮ ಮಂದಿರದ ವಠಾರದಲ್ಲಿ ನಿರ್ಮಾಣಗೊಂಡಿರುವ ಭವ್ಯವಾದ ಪಾಕಶಾಲೆಯ ಪ್ರಾರಂಭೋತ್ಸವವು ದ.14ರಂದು ಬೆಳಿಗ್ಗೆ ನಡೆಯಲಿದೆ.ಸುಮಾರು 42 ಲಕ್ಷ ರೂ.ವೆಚ್ಚದಲ್ಲಿ ಈ ಭವ್ಯವಾದ ಪಾಕಶಾಲೆ ನಿರ್ಮಾಣಗೊಂಡಿದ್ದು, ಈಗಾಗಲೇ ಪಾಕಶಾಲೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ಪಾಕಶಾಲೆಯ ಒಂದು ಭಾಗದ ಆರಂಭೋತ್ಸವವು ನಡೆಯಲಿದೆ.



ವೇದಮೂರ್ತಿ ಕೃಷ್ಣಕುಮಾರ್ ಉಪಾಧ್ಯಾಯ ಪಟ್ಲಮೂಲೆರವರ ನೇತೃತ್ವದಲ್ಲಿ ವೈಧಿಕ ಕಾರ್ಯಕ್ರಮ ನಡೆಯಲಿದ್ದು ದ.13 ರಂದು ಸಂಜೆ ವಾಸ್ತು ಪೂಜೆ ನಡೆದು ದ.14ರಂದು ಬೆಳಿಗ್ಗೆ ಗಣಪತಿ ಹೋಮ, ಅನ್ನಪೂರ್ಣೆಶ್ವರಿ ಆರಾಧನೆಯೊಂದಿಗೆ ಪಾಕಶಾಲೆಯಲ್ಲಿ ಹಾಲು ಉಕ್ಕಿಸುವ ಕಾರ್ಯಕ್ರಮ, ದೀಪ ಪ್ರಜ್ವಲನೆ, ದಿನಸಿ ಸಾಮಾಗ್ರಿ ಕೊಠಡಿ ಉದ್ಘಾಟನೆ, ಪಾತ್ರೆ ಸಾಮಾಗ್ರಿ ಕೊಠಡಿ ಉದ್ಘಾಟನೆ ನಡೆಯಲಿದೆ. ಪಾಕಶಾಲೆಯ ದೀಪ ಪ್ರಜ್ವಲನೆಯನ್ನು ಬೊಳ್ಳಾಡಿ ಡೆಕೊರೇಟರ‍್ಸ್ ಬೆಂಗಳೂರು ಇದರ ಮಾಲಕರಾದ ವೆಂಕಪ್ಪ ಗೌಡ ಬೊಳ್ಳಾಡಿ ಮಾಡಲಿದ್ದು, ದಿನಸಿ ದಾಸ್ತಾನು ಕೊಠಡಿಯ ದೀಪ ಪ್ರಜ್ವಲನೆಯನ್ನು ಉದ್ಯಮಿ ಕೊಡಂಕೀರಿ ಶಶಿಧರ ರೈ ಗೋವಾ ನೆರವೇರಿಸಲಿದ್ದು, ಪಾತ್ರೆ ಸಾಮಾಗ್ರಿ ಕೊಠಡಿಯ ದೀಪ ಪ್ರಜ್ವಲನೆಯನ್ನು ಪುತ್ತೂರು ಕಿರಣ್ ಎಂಟರ್‌ಪ್ರೈಸಸ್ ಮಾಲಕ ಕೇಶವ ನಾೖಕ್ ಮಾಡಲಿದ್ದಾರೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀರಾಮ ಮಂದಿರದ ಆಡಳಿತ ಸಮಿತಿ ಮತ್ತು ಭಜನಾ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರಕಟಣೆ ತಿಳಿಸಿದೆ.










