ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ

0

ಪುತ್ತೂರು: ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025-26ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು ಜು.12ರಂದು ಶಾಲಾ ಸಭಾಂಗಣದಲ್ಲಿ ಎರಡು ಅವಧಿಗಳಲ್ಲಿ ನಡೆಯಿತು.

ಬೆಳಗಿನ ಪ್ರಥಮ ಅಧಿವೇಶನದಲ್ಲಿ ಮಂಗಳೂರಿನ ಶಾಂತಿ ಕಿರಣ್ ಕೌನ್ಸಿಲಿಂಗ್ ಸೆಂಟರ್‌ನ ನಿರ್ದೇಶಕರಾದ ಫಾದರ್ ಅರುಣ್ ಲೋಬೋ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಅವರು ಪೋಷಕರೊಂದಿಗೆ ಸಂವಾದ ನಡೆಸಿ, ಮಕ್ಕಳಲ್ಲಿ ಕಂಡುಬರುವ ಸಮಸ್ಯೆಗಳನ್ನು ವಿವರವಾಗಿ ವಿಶ್ಲೇಷಿಸಿದರು. ಇಂದಿನ ಜೀವನದಲ್ಲಿ ತಾಳ್ಮೆಯ ಕೊರತೆಯನ್ನು ಎತ್ತಿ ಹಿಡಿದ ಅವರು, ಪೋಷಕರು ತಮ್ಮ ಮಕ್ಕಳ ಜೀವನಶೈಲಿ ಮತ್ತು ಅವರ ಸಹಪಾಠಿಗಳನ್ನು ಗುರುತಿಸುವಂತೆ ಸಲಹೆ ನೀಡಿದರು. ಮಕ್ಕಳು ಸಮಸ್ಯೆಗಳಲ್ಲಿದ್ದಾಗ ಪೋಷಕರು ಅದನ್ನು ಬಗೆಹರಿಸಲು ಮುಂದೆ ಬರಬೇಕು ಹಾಗೂ ದಿನದಲ್ಲಿ ಕನಿಷ್ಠ 30 ನಿಮಿಷಗಳ ಕಾಲ ಮಕ್ಕಳೊಂದಿಗೆ ಕಳೆಯಬೇಕು ಅಥವಾ ಊಟ ಮಾಡುವಾಗಲಾದರೂ ಅವರೊಂದಿಗೆ ಮಾತನಾಡಬೇಕು ಎಂದು ಮಾಹಿತಿ ನೀಡಿದರು.


ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಾಂಶುಪಾಲೆ ಭಗಿನಿ ಅನಿತಾ ಶಾಲೆಯ ನಿಯಮಗಳ ಕುರಿತು ವಿವರವಾದ ಮಾಹಿತಿ ನೀಡಿದರು.
2024-25ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಘುನಾಥ್ ರೈ ಮತ್ತು ಇಸ್ಮಾಯಿಲ್ ಶಾಫಿ, ಮಕ್ಕಳ ಸುರಕ್ಷಾ ಸಮಿತಿಯ ಅಧ್ಯಕ್ಷೆ ಸುನಿತಾ ಪಿರೇರಾ, ಪ್ರತಿಕ್ಷಾ ಪೈ, ಹಾಗೂ ಉಪಾಧ್ಯಕ್ಷ ರಾಮಚಂದ್ರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಅಪರಾಹ್ನ ನಡೆದ ಎರಡನೇ ಅಧಿವೇಶನದಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಕಾಲೇಜಿನ ಕ್ಲಿನಿಕಲ್ ಸೈಕಾಲಜಿ ಪ್ರಾಧ್ಯಾಪಕ ರಿಕಿತಾ ಪಾಯಸ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಅವರು ಮಕ್ಕಳ ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಬರುವವರೆಗೂ ಪೋಷಕರು ಮಕ್ಕಳ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಿದರು.


ಶಾಲಾ ಪ್ರಾಂಶುಪಾಲೆ ಭಗಿನಿ ಅನಿತಾ ಸ್ವಾಗತಿಸಿದರು. ಭಗಿನಿ ಗ್ರೇಸಿ ಮೋನಿಕಾ ವಂದಿಸಿದರು. ಶಿಕ್ಷಕರಾದ ಬೃಂದಾ ಕಾರ್ಯಕ್ರಮ ನಿರೂಪಿಸಿದರು. ಪವಿತ್ರಾ, ಅನಿತಾ, ಮತ್ತು ಸುಮನಾ ವಿವಿಧ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ 2024-25ನೇ ಸಾಲಿನ 10ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here