ಪುತ್ತೂರು:ಇಲ್ಲಿನ ಮುಖ್ಯರಸ್ತೆ ದರ್ಬೆಯಲ್ಲಿ ಸರಣಿ ಅಪಘಾತ ಸಂಭವಿಸಿ ನಂತರ ಮಾತಿನ ಚಕಮಕಿ ನಡೆದ ಘಟನೆ ಜು.12ರ ರಾತ್ರಿ ನಡೆದಿದೆ.
ಮೂವರು ಕುಳಿತುಕೊಂಡು ಹೋಗುತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಹೋಗುತ್ತಿದ್ದ ವೇಳೆ ಹಿಂದಿನ ಕಾರಿನವರು ಬ್ರೇಕ್ ಹಾಕಿದ್ದರು. ಈ ವೇಳೆ ಹಿಂದಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ-ಕಾರಿಗೆ ಅಪಘಾತವಾಗಿದೆ. ಈ ವೇಳೆ ಅಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.