ಶ್ರೀಧಾಮ ಮಾಣಿಲದಲ್ಲಿ 22ನೇ‌ ದಿನದ ಸಾಮೂಹಿಕ ಲಕ್ಷ್ಮೀ ಪೂಜೆ

0

ಭಕ್ತಿಯಿಂದ ಆರೋಗ್ಯ, ನೆಮ್ಮದಿ ಸಾಧ್ಯ‌ : ಮಾಣಿಲ ಶ್ರೀ

ವಿಟ್ಲ: ಭಗವಂತನು ಸರ್ವಶ್ರೇಷ್ಟ. ತಂದೆ ತಾಯಿಯರಲ್ಲಿ‌ ದೇವರನ್ನು ಕಾಣಬೇಕು. ಕಾಣದೆ ಇರುವ ಶಕ್ತಿಯೇ ದೇವರು. ನಂಬಿಕೆ ಎಲ್ಲರಲ್ಲಿರಬೇಕು. ಸಂತನಲ್ಲಿ ಅಪೇಕ್ಷೆಗಳಿಲ್ಲ. ಎಲ್ಲರ ಒಳಿತನ್ನು ಬಯಸುವವರೇ ಸಂತರು. ಭಕ್ತಿಯಿಂದ ಆರೋಗ್ಯ, ನೆಮ್ಮದಿ ಸಾಧ್ಯ‌ ಎಂದು ಶ್ರೀಧಾಮ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಅವರು ಜು.13ರಂದು ಶ್ರೀಧಾಮದಲ್ಲಿ ನಡೆದ ಇಪ್ಪತ್ತೆರಡನೇ ದಿನದ ಸಾಮೂಹಿಕ ಶ್ರೀ ಲಕ್ಷ್ಮೀಪೂಜೆಯ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು‌.

ಹಿಂದೂ ಸಮಾಜ ಧನಾತ್ಮಕವಾಗಿ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ಮ ಭೂಮಿ ದೇವ ಭೂಮಿಯಾಗಬೇಕು. ಭಕ್ತಿ ಮಾರ್ಗದಲ್ಲಿ ಎಲ್ಲರು ಸಾಗಬೇಕು. ವರಮಹಾಲಕ್ಷ್ಮೀ ವೃತಾಚರಣೆಯ ಮಹತ್ವವನ್ನು ಎಲ್ಲರು ಅರಿಯುವಂತಾಗಬೇಕು ಎಂದರು.

ಕ್ಷೇತ್ರದ ಮಾಜಿ ಟ್ರಸ್ಟಿ ಚಂದ್ರಶೇಖರ ತುಂಬೆ, ಪ್ರಗತಿಪರ ಕೃಷಿಕರಾದ ದೇವದಾಸ ಆಳ್ವ ಮಿಜಾರು, ಜನಾರ್ದನ ಸೇರಾಜೆ, ಚಂದ್ರಶೇಖರ ಪೆರುವಾಯಿ,ಕುದ್ದುಪದವು ಶಾಲಾ ಶಿಕ್ಷಕಿ ಯಶಸ್ವಿನಿ ಚಂದ್ರಶೇಖರ್ , ಮಹಾಲಕ್ಷ್ಮಿಯ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ ಶೆಟ್ಟಿ, ಶ್ರೀಧಾಮ ಮಿತ್ರ ವೃಂದದ ಕಾರ್ಯದರ್ಶಿ ಜಗನ್ನಾಥ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿ. ಸೋಮಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿ‌, ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here