ನೆಲ್ಯಾಡಿ: ಅಲ್ಟೋ ಕಾರೊಂದಕ್ಕೆ ತೂಫಾನ್ ವಾಹನವು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಆಲ್ಟೊ ಕಾರು ಜಖಂಗೊಂಡ ಘಟನೆ ಜು.12ರಂದು ಬೆಳಿಗ್ಗೆ ನೂಜಿಬಾಳ್ತಿಲ ಗ್ರಾಮದ ಬೆಥನಿ ಕಾನ್ವೆಂಟ್ ಶಾಲೆಯ ಬಳಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಂಡಿಗಡಿ ಗ್ರಾಮದ ಹಂಡಿಬೈಲು ನಿವಾಸಿ ಸುಬ್ರಹ್ಮಣ್ಯ ಎಂಬವರು ತಮ್ಮ ಆಲ್ಟೊ ಕಾರು ಚಲಾಯಿಸಿಕೊಂಡು ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದ ವೇಳೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬೆಥನಿ ಕಾನ್ವೆಂಟ್ ಶಾಲೆಯ ಬಳಿ ತಲುಪುತ್ತಿದ್ದಂತೆ ಹಿಂದಿನಿಂದ ಬರುತ್ತಿದ್ದ ತೂಫಾನ್ ಡಿಕ್ಕಿ ಹೊಡೆದಿದೆ.
ಪರಿಣಾಮ ಆಲ್ಟೊ ಕಾರಿನ ಹಿಂಬದಿ ಮಡ್ಗರ್ ಹಾಗೂ ಹಿಂಬದಿ ಡಿಕ್ಕಿಯ ಡೋರ್ ಜಖಂಗೊಂಡಿದೆ. ಈ ಬಗ್ಗೆ ಅಲ್ಟೋ ಕಾರು ಚಾಲಕ ಸುಬ್ರಹ್ಮಣ್ಯ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.