ಬಡಗನ್ನೂರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು, ಬ್ಯಾಂಕ್ ಆಫ್ ಬರೋಡ ಈಶ್ವರಮಂಗಲ, ವಿಜಯ ಗ್ರಾಮಸಮಿತಿ ಸುಳ್ಯಪದವು ಇದರ ವತಿಯಿಂದ ದ.ಕ.ಜಿ.ಪಂ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಬಡಗನ್ನೂರು ಇಲ್ಲಿಯ ವಿದ್ಯಾರ್ಥಿಗಳಿಗಾಗಿ ” ಭತ್ತದ ನಾಟಿ” ಮಾಹಿತಿ ಕಾರ್ಯಗಾರ ಮತ್ತು ಪ್ರಾತ್ಯೆಕ್ಷಿಕೆ ಕಾರ್ಯಕ್ರಮ ಜು.12 ರಂದು ನಾಟಿ ವೈದ್ಯ ವಿಶ್ವನಾಥ ಪೂಜಾರಿ ಪೂಜಾರಿಮೂಲೆ ರವರ ಮನೆಯಂಗಳದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕರು ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರೂ ಆದ ನಾರಾಯಣ ರೈ ಕುದ್ಕಾಡಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಇಂದಿನ ಮಕ್ಕಳಿಗೆ ಕೃಷಿ ಚಟುವಟಿಕೆಯ ಪರಿಚಯ ಮಾಡುವ ಇಂತಹ ಕಾರ್ಯಕ್ರಮ ಅತ್ಯುತ್ತಮ ಕಾರ್ಯಕ್ರಮ ಇಂತಹ ಕಾರ್ಯಕ್ರಮ ಅಯೋಜನೆ ಮಾಡಿದ ಸುಳ್ಯಪದವು ವಿಜಯ ಗ್ರಾಮೀಣ ಸಮಿತಿಗೆ ಕೖತಜ್ಞತೆ ಸಲ್ಲಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ನಂತರ ಮಕ್ಕಳಿಗೆ ಭತ್ತದ ನಾಟಿಯ ಪ್ರಾತ್ಯಕ್ಷಿಕೆ ನೀಡಲಾಯಿತು..
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ನಾಟಿ ವೈದ್ಯರಾದ ವಿಶ್ವನಾಥ ಪೂಜಾರಿ ಪೂಜಾರಿ ಮೂಲೆ ರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಜಯ ಗ್ರಾಮಸಮಿತಿಯ ಅಧ್ಯಕ್ಷರಾದ ಗೋವಿಂದ ಭಟ್ ಪೈರುಪುಣಿ, ವಿಜಯಗ್ರಾಮ ಸಮಿತಿಯ ಸದಸ್ಯರಾದ ಮಾಧವ ನಾಯಕ್ ಇಂದಾಜೆ, ಪ್ರಣಮ್ ರೈ , ಮುಖ್ಯ ಗುರುಗಳಾದ ಹರಿಣಾಕ್ಷಿ ಎ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುರೇಶ್ ರೈ ಪಳ್ಳತ್ತಾರು, ಎಸ್ ಡಿ ಎಂ ಸಿ ಅಧ್ಯಕ್ಷರಾದ ಗಿರೀಶ್ ಗೌಡ ಕೆ, ಉಪಾಧ್ಯಕ್ಷರಾದ ಸುಲೋಚನ ನೇರ್ಲಂಪಾಡಿ, ಸದಸ್ಯರಾದ ಸುನೀತಾ ಏರಾಜೆ, ಸಾವಿತ್ರಿ ಎ ಬಿ, ವಿಜಯಲಕ್ಷ್ಮಿ, ಶೋಭಾ ಕೆ, ಉಷಾಲತಾ, ಚಂದ್ರಿಕಾ, ಬಾಬುಮೂಲ್ಯ , ಮಕ್ಕಳ ಪೋಷಕರು ಹಾಗೂ ಶಿಕ್ಷಕರು , ಅಕ್ಷರ ದಾಸೋಹ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮಣ್ಣಿನೊಂದಿಗೆ ಆಟ ಬೇಸಾಯದ ಪಾಠ
ಮಕ್ಕಳ ಬೇಸಾಯದ ಪಾಠಕ್ಕೆ ಪೂಜಾರಿಮೂಲೆ ವಿಶ್ವನಾಥ ಪೂಜಾರಿಯವರ ಗದ್ದೆ ವೇದಿಕೆಯಾಗಿದೆ. ಮಕ್ಕಳಿಗೆ ಅನ್ನದ ಶ್ರಮ ತಿಳಿಸುವ ಜೊತೆಗೆ ಮಣ್ಣಿನ ಕಾಯಕದ ಪರಿಚಯವೂ ಮಾಡಲಾಯಿತು. ಕಾರ್ಯಕ್ರಮದ ನಂತರ ಮಕ್ಕಳು ಹಾಗೂ ಪೋಷಕರು ಕೆಸರುಗದ್ದೆಯಲ್ಲಿ ಗ್ರಾಮೀಣ ಕ್ರೀಡೆಯ ಆನಂದವನ್ನು ಸವಿದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಭತ್ತದ ಸಸಿಯನ್ನು ವಿತರಿಸುವ ಮೂಲಕ ಕಾರ್ಯಕ್ರಮ ಸಮಾಪಣೆಗೊಂಡಿತು.