ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ 53ನೇ ವಾರ್ಷಿಕ ಸಾಮಾನ್ಯ ಸಭೆ

0

ರೂ.96.485 ಲಾಭ, 32 ಪೈಸೆ ಬೋನಸ್

  • ಸಂಘದ ಇತಿಹಾಸದಲ್ಲೇ ಪ್ರಥಮ ಬಾರಿಗೆ ‘ಎ’ ಶ್ರೇಣಿ

ಪುತ್ತೂರು:ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ರೂ.96,485.59 ಲಾಭಗಳಿಸಿ ಹಾಲು ಉತ್ಪಾದಕರಿಗೆ ಪ್ರತಿ ಲೀ.ಹಾಲಿಗೆ 32 ಪೈಸೆ ಬೋನಸ್ ನೀಡಲಾಗುವುದು. ಸಂಘದ 53 ವರ್ಷಗಳ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ‘ಎ’ಶ್ರೇಣಿಯನ್ನು ಪಡೆದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಡುಮನೆ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ತಿಳಿಸಿದರು.


ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಜು.14ರಂದು ಕೋಡಿಂಬಾಡಿ ಚತುರ್ಥಿ ರಂಗಮಂದಿರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ವರ್ಷದಲ್ಲಿ ಸಂಘವು 208 ಮಂದಿ ಸದಸ್ಯರಿಂದ ರೂ.61,900 ಪಾಲು ಬಂಡವಾಳ ಹೊಂದಿದೆ. ಸದಸ್ಯರಿಂದ 1,43,109.87 ಲೀಟರ್ ಹಾಲುನ್ನು ಖರೀದಿಸಿದೆ. ಇದರಲ್ಲಿ 14,082 ಲೀ. ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಿ ಉಳಿಕೆ 1,29,027.87 ಲೀ. ಹಾಲು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. ಸಂಘವು ವರದಿ ವರ್ಷದಲ್ಲಿ ಗಳಿಸಿದ ಲಾಭಾಂಶವನ್ನು ಉಪ ನಿಬಂಧನೆಯಂತೆ ವಿಂಗಡಿಸಲಾಗಿದೆ.


ದ.ಕ ಹಾಲೂ ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಮಾತನಾಡಿ, ಒಕ್ಕೂಟ ಹಾಗೂ ಸರಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆದುಕೊಂಡು ಹೈನುಗಾರಿಕೆಯನ್ನು ಅಭಿವೃದ್ಧಿ ಪಡಿಸುವಂತೆ ತಿಳಿಸಿದರು.


ಸದಸ್ಯರಾದ ಬಾಲಕೃಷ್ಣ ಬೋರ್ಕರ್, ಜಯಾನಂದ ಕೆ., ವಾರಿಸೇನ ಹಾಗೂ ಬಾಬು ಗೌಡ ವಿವಿಧ ಸಲಹೆ, ಸೂಚನೆಗಳನ್ನು ನೀಡಿದರು. ಉಪಾಧ್ಯಕ್ಷ ಕೇಶವ ಗೌಡ, ನಿರ್ದೆಶಕರಾದ ಅಶೋಕ್ ಗೌಡ, ರತ್ನವರ್ಮ ಆಳ್ವ ಯಂ., ಚಂದ್ರಶೇಖರ ರೈ, ವಿಜಯಲಕ್ಷ್ಮೀ ಆರ್ ನಾಯಕ್, ರೇಣುಕಾ ಎಂ.ರೈ, ರಾಧಿಕಾ ಆರ್ ಸಾಮಂತ್, ಲೀಲಾವತಿ ಪಿ. ಹಾಗೂ ಬಾಬು ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಬಹುಮಾನ, ವಿದ್ಯಾರ್ಥಿ ವೇತನ ವಿತರಣೆ:
2024-25ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಹಾಲು ಉತ್ಪಾದಕರಾದ ಅಜಿತ್ ಕುಮಾರ್, ನಾರಾಯಣ ಶೆಟ್ಟಿ ಹಾಗೂ ಸುಂದರಿಯವರನ್ನು ಗೌರವಿಸಲಾಯಿತು. ಎಲ್ಲ ಹಾಲು ಉತ್ಪಾದಕರನ್ನು ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥ ವೇತನ ವಿತರಿಸಲಾಯಿತು.
ನಿರ್ದೇಶಕರಾದ ಸಂತೋಷ ರೈ ಸ್ವಾಗತಿಸಿ, ಎಲ್ಯಣ್ಣ ಗೌಡ ವಂದಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ರಮೇಶ್ ಪೂಜಾರಿ ಕೆ ವರದಿ, ಲೆಕ್ಕಪತ್ರ ಮಂಡಿಸಿದರು. ಸಿಬಂದಿಗಳಾದ ನಾರಾಯಣ ಹಾಗೂ ಕವಿತಾ ಸಹಕರಿಸಿದರು.


ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿದ ಶೇ.100ರಷ್ಟು ಈಡೇರಿಸಿದ್ದು ಸಂಘವು ಪ್ರಥಮ ಬಾರಿಗೆ ‘ಎ’ ಶ್ರೇಣಿ ಪಡೆದುಕೊಂಡಿದೆ. ಸಂಘದ ಮುಖಾಂತರ ನಡೆಸಲಾದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ 62 ಮಂದಿ ಭಾಗವಹಿಸಿ, 11 ಮಂದಿಗೆ ಸಬ್ಸಿಡಿ ದರದಲ್ಲಿ ಕನ್ನಡಕ ವಿತರಿಸಲಾಗಿದೆ. ಶಾಸಕ ಅಶೋಕ್ ಕುಮಾರ್ ರೈಯವರು ರೂ.3 ಲಕ್ಷ, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ರೂ.2 ಸೇರಿಂದರೆ ಒಟ್ಟು ರೂ.5ಲಕ್ಷ ಅನುದಾನ ಸರಕಾರದಿಂದ ಮಂಜೂರುಗೊಂಡಿದೆ. ಮನೆಗೊಂದು ಮಗುವಿರುವಂತೆ ಪ್ರತಿ ಮನೆಯಲ್ಲಿ ಒಂದು ಕರುವಿರಬೇಕು. ಸರಕಾರ ಹಾಗೂ ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಂಡು ಹೈನುಗಾರಿಕೆಯನ್ನು ಮುನ್ನಡೆಸಬೇಕು.

-ಜಗನ್ನಾಥ ಶೆಟ್ಟಿ ನಡುಮನೆ,
ಅಧ್ಯಕ್ಷರು ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘ

LEAVE A REPLY

Please enter your comment!
Please enter your name here