ದೇಶದಲ್ಲೇ ಮೊದಲ ಬಾರಿಗೆ ತ್ರೈಮಾಸಿಕ ಲಾಭಾಂಶ ಘೋಷಣೆ ಮಾಡಿದ್ದು ಕರ್ಣಾಟಕ ಬ್ಯಾಂಕ್ – ಬಿ.ಎಸ್.ರಾಜ
ಪುತ್ತೂರು : 1924ರಲ್ಲಿ ಸ್ಥಾಪಿತವಾದ ಕರ್ಣಾಟಕ ಬ್ಯಾಂಕಿನ 5ನೇ ಶಾಖೆಯನ್ನು ಪುತ್ತೂರಿನಲ್ಲಿ 80 ವರ್ಷದ ಹಿಂದೆ ಸ್ಥಾಪಿಸಲಾಗಿತ್ತು. ಇದೀಗ ಮತ್ತೊಮ್ಮೆ ಪುತ್ತೂರಿನಲ್ಲಿ ಎರಡನೇ ಶಾಖೆ ಶುಭಾರಂಭಗೊಂಡಿದೆ.ನೂರು ವರ್ಷಗಳಿಂದ ನಮ್ಮ -ನಿಮ್ಮೆಲ್ಲರ ಮದ್ಯೆ ನಿಂತಿರುವಂತಹ ಬ್ಯಾಂಕ್ ನ್ನು ಇನ್ನಷ್ಟೂ ಬೆಳೆಸಿ , ಅಭಿವೃದ್ದಿ ಪಥದಲ್ಲೇ ಕೊಂಡೊಯ್ಯೊಣವೆಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ಣಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ಬಿ.ಎಸ್ ರಾಜ ಅಭಿಪ್ರಾಯ ವ್ಯಕ್ತಪಡಿಸಿದರು.

ಜು.14 ರಂದು ಇಲ್ಲಿನ ದರ್ಬೆ ಪ್ರಶಾಂತ್ ಮಹಲ್ ನ ಮೇಲಿನ ಮಹಡಿಯಲ್ಲಿ ಕಾರ್ಯನಿರ್ವಹಿಸಲಿರುವ ನೂತನ ಶಾಖೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರಿ ಸೌಲಭ್ಯ ಸೇರಿದಂತೆ ಅನೇಕ ಸೌಲಭ್ಯ ನಮ್ಮಲ್ಲಿದ್ದು , ದೇಶದ ಆರ್ಥಿಕತೆಗೆ ಬೆನ್ನೆಲುಬು ಆಗಿರುವ ಬ್ಯಾಂಕ್ ಎಲ್ಲರೊಂದಿಗೆ ಸೇರಿ ಕಾರ್ಯನಿರ್ವಹಿಸುತ್ತಿದೆಯಲ್ಲದೇ, ಹಲವು ಅಪವಾದಗಳು ಬಂದಾಗಲೂ ಗ್ರಾಹಕರು ನಮ್ಮೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ. ತ್ರೈ ಮಾಸಿಕ ಅವಧಿಯಲ್ಲಿ ಲಾಭಾಂಶ ಪ್ರಚಾರ ಪಡಿಸುತ್ತಾ ಮುಂದೆ ಬಂದಿರುವ ಬ್ಯಾಂಕ್ ಇದ್ದರೆ ಅದು ಕರ್ಣಾಟಕ ಬ್ಯಾಂಕ್ ಎಂದು ಹೇಳಿದ ಅವರು, 100 ವರ್ಷಗಳ ಹಿಂದೆ ಕೃಷಿಕರು, ವಕೀಲರು ಸೇರಿದಂತೆ ಅನೇಕರು ಸೇರಿ ಆರಂಭಿಸಿದ ಈ ಬ್ಯಾಂಕ್ ಲಾಭಗಳೊಂದಿಗೆ ಮುನ್ನಡೆಯುತ್ತಿದೆ. ಮುಂದೆಯೂ ನಿಮ್ಮೆಲ್ಲರ ಸಹಕಾರ ಅಗತ್ಯ. ಹಿರಿಯರ ಮಾರ್ಗದರ್ಶನದಂತೆ ಪ್ರತಿ ವರ್ಷ ಲಾಭಾಂಶದಲ್ಲಿ ಇಂತಿಷ್ಟನ್ನು ಶಿಕ್ಷಣ ಸೇರಿದಂತೆ ಅನೇಕ ಸಾಮಾಜಿಕ ಕ್ಷೇತ್ರಗಳಿಗೆ ನೀಡುತ್ತಿದ್ದೇವೆ ಎಂದು ಹೇಳಿದರು.
ಬ್ಯಾಂಕಿಂಗ್ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದಿರಿ. ನಕಲಿ ಕರೆಗಳು ಬಂದಾಗ ಯಾವುದೇ ಒಟಿಪಿ, ಪಾಸ್ ವರ್ಡ್ ನೀಡದಿರಿ ಎಂದು ಮನವಿ ಮಾಡಿದ ಅವರು, 55 ವರ್ಷಗಳ ಹಿಂದೆ ಜ್ಞಾನಪೀಠ ಪುರಸ್ಕೃತ ಶಿವರಾಮ ಕಾರಂತರು ಶೃಂಗೇರಿ ಮಠದ ಸಹಕಾರದೊಂದಿಗೆ ಗಣಪತಿ ಮಂಡಲದ ಚಿಹ್ನೆಯನ್ನು ಕರ್ಣಾಟಕ ಬ್ಯಾಂಕ್ ಗೆ ಲೋಗೋವಾಗಿ ನೀಡಿದ್ದಾರೆ ಎಂದರು.
ಮಿನಿ ಇ ಲಾಬಿ ಇದರ ಉದ್ಘಾಟನೆಯನ್ನು ಜನರಲ್ ಮ್ಯಾನೇಜರ್ ಜಯನಾಗರಾಜ ರಾವ್ ನೆರವೇರಿಸಿ, ಹಾರೈಸಿದರು. ಆ ಬಳಿಕ ಶಾಖೆಗೆ ಸ್ಥಳಾವಕಾಶ ನೀಡಿದ ಉದ್ಯಮಿ ಸವಣೂರು ಸೀತರಾಮ ರೈ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ್ – ಗ್ರಾಹಕರ ಮಧ್ಯೆ ಕೊಂಡಿಯಾಗಿದ್ದ ನಿವೃತ್ತ ಸಿಬ್ಬಂದಿಗಳಾದ ವೇಣುಗೋಪಾಲ್ ಭಟ್, ಈಶ್ವರ್ ಭಟ್ ಪುಲು , ಮಹಾಲಿಂಗೇಶ್ವರ ಭಟ್ ಹಾಗೂ ಕೆ.ಎಸ್. ಭಟ್ ಇವರುಗಳನ್ನು ಸನ್ಮಾನಿಸಲಾಯಿತು. ಎ.ಜಿ.ಎಂ. ವಿಶ್ವನಾಥ ಎಸ್ ಆರ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಪ್ರಾರ್ಥನೆಗೈದ ನೂತನ ಶಾಖೆಯ ಮ್ಯಾನೇಜರ್ ಸ್ವರ್ಣಲತಾ ವಂದನಾರ್ಪಣೆ ಸಲ್ಲಿಸಿ, ಪುತ್ತೂರು ಕ್ಲಸ್ಟರ್ ಹೆಡ್ ಶ್ರೀ ಶ್ರೀಹರಿ ಕಾರ್ಯಕ್ರಮ ನಿರೂಪಿಸಿ, ಪುತ್ತೂರು ಪ್ರಧಾನ ಶಾಖೆಯ ಸೀನಿಯರ್ ಮ್ಯಾನೇಜರ್ ಶ್ರೀಶ ವಿವಿಧ ರೀತಿ ಸಹಕರಿಸಿದರು. ಈ ವೇಳೆ ಹಿತೈಷಿಗಳು, ಗ್ರಾಹಕರು, ಸಿಬಂದಿಗಳು ಹಾಜರಿದ್ದರು.

ಕಾಲೇಜಿಗೆ ಕೊಡುಗೆ
ಸಾಂಸ್ಥಿಕ ಸೇವಾ ಜವಾಬ್ದಾರಿ ( ಸಿ ಎಸ್ ಆರ್) ಮೂಲಕ ಬ್ಯಾಂಕ್ ಲಾಭಾಂಶದ ಶೇಕಡಾ ಎರಡನ್ನು ಶಿಕ್ಷಣ , ಆರೋಗ್ಯ , ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಾಗಿ ಮೀಸಲಿಟ್ಟಿದ್ದು , ಕಂಪ್ಯೂಟರ್ ಖರೀದಿಗಾಗಿ ಸಂತ ಫಿಲೋಮಿನಾ ಕಾಲೇಜು ಇದರ ಆಡಳಿತ ಮಂಡಳಿಗೆ ಸಹಾಯ ಧನ ಚೆಕ್ ನ್ನು ಬ್ಯಾಂಕ್ ಜನರಲ್ ಮ್ಯಾನೇಜರ್ ಬಿ.ಎಸ್.ರಾಜ ನೀಡಿದರು. ಕಾಲೇಜಿನ ಉಪ ಪ್ರಾಂಶುಪಾಲ ವಿಜಯ ಕುಮಾರ್ ಮೊಳೆಯರ್ ಚೆಕ್ ಸ್ವೀಕರಿಸಿದರು. ಈ ವೇಳೆ ಇತರ ಸಿಬಂದಿಗಳು ಇದ್ದರು.