ರಾಮಕುಂಜ: ಕೊಯಿಲ ಬಿ.ಜೆ.ಪಿ ಶಕ್ತಿ ಕೇಂದ್ರ ಮತ್ತು ಮಹಿಳಾ ಮೋರ್ಚಾದ ವತಿಯಿಂದ ಕೊಯಿಲ 4ನೇ ಬೂತ್‌ನ ಆನೆಗುಂಡಿಯ ತಿರುಮಲ ಮನೆಯಲ್ಲಿ ಗುರುವಂದನಾ ಕಾರ್ಯಕ್ರಮ ಜರಗಿತು.
ಆಲಂಕಾರು ಶ್ರೀ ಭಾರತೀ ಶಾಲೆಯಲ್ಲಿ 25 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಯದುಶ್ರೀ ಮತ್ತು ಮಮತಾಯದುಶ್ರೀ ಆನೆಗುಂಡಿ ಇವರಿಗೆ ಗುರುವಂದನಾ ಕಾರ್ಯಕ್ರಮದ ಮೂಲಕ ಗೌರವಾರ್ಪಣೆ ಸಲ್ಲಿಸಲಾಯಿತು.
ಬಿಜೆಪಿ ಸುಳ್ಯ ಮಂಡಲ ಉಪಾಧ್ಯಕ್ಷೆ ತೇಜಸ್ವಿನಿ ಕಟ್ಟಪುಣಿ, ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಹೇಮಾ ಮೋಹನ್‌ದಾಸ್, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಅಶೋಕ್ ಕೊಯಿಲ, ಕೊಯಿಲ ಗ್ರಾ.ಪಂ.ಮಾಜಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಕೊಯಿಲ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಕಾಶ್ ಕೆ.ಆರ್., ಬೂತ್ ಅಧ್ಯಕ್ಷರಾದ ಸೀತಾರಾಮ ವಳಕಡಮ, ಮಲ್ಲಿಕಾ ಕರುಣಾಕರ ಚೌಟ, ಜಯಶ್ರೀ ಬಡ್ಡಮೆ, ಕೊಯಿಲ ಗ್ರಾ.ಪಂ.ಸದಸ್ಯರಾದ ಕಮಲಾಕ್ಷಿ, ಚಂದ್ರಶೇಖರ್ ಮಾಳ, ಬೂತ್ ಕಾರ್ಯದರ್ಶಿಗಳಾದ ಹರಿಶ್ಚಂದ್ರ ಮಾಳ, ವಿನಯ್ ರೈ ಪಟ್ಟೆ, ಕಾಂತಿಮಣಿ, ಯದುಶ್ರೀ-ಮಮತಾ ದಂಪತಿಯ ಮಕ್ಕಳಾದ ಅರ್ಜುನ್ ವೈ.ಟಿ., ಅಭಿನವ್ ವೈ.ಟಿ., ಅನುಜ್ಞಾ ವೈ.ಟಿ., ಉಪಸ್ಥಿತರಿದ್ದರು.
