ಪುತ್ತೂರು: ಕಲ್ಲಾರೆಯ ಪವಾಜ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ ದಕ್ಷಿಣ ಕನ್ನಡ ತೆಂಗು ರೈತ ಸಂಸ್ಥೆಯು ಧನ್ವಂತರಿ ಆಸ್ಪತ್ರೆಯ ಹತ್ತಿರದ ಎಂ.ಆರ್. ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಜು.14 ರಂದು ಉದ್ಘಾಟನೆಗೊಂಡಿದೆ.
ಸಂಸ್ಥೆಯ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಕುಸುಮಧರ್ ಎಸ್.ಕೆ ಹಾಗೂ ಗೌರವಾಧ್ಯಕ್ಷ ಕೃಷಿಕ ಕಡಮಜಲು ಸುಭಾಷ್ ರೈರವರು ಜೊತೆಗೂಡಿ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಲಹಾ ಸಮಿತಿಯ ಸದಸ್ಯ ಕುಮಾರ್ ಪೆರ್ನಾಜೆ, ನಿರ್ದೇಶಕರಾದ ವರ್ಧಮಾನ್ ಶೆಟ್ಟಿ, ಲತಾ, ಮುಖ್ಯ ಸಲಹೆಗಾರ ಯತೀಶ್ ಕೆ.ಎಸ್., ಹಾಗೂ ಲಹರಿ ಡ್ರೈಫ್ರೂಟ್ಸ್ ಸಂಸ್ಥೆಯ ಮಾಲಕಿ ಲಿಖಿತ ಕುಸುಮ್ ಭಾಗವಹಿಸಿದ್ದರು.
ಸಿಬ್ಬಂದಿ ನಿರ್ಮಲಾ ಪ್ರಾರ್ಥಿಸಿದರು. ಸಿಇಒ ಗಣೇಶ್ ಕೆ. ಸ್ವಾಗತಿಸಿ, ಮ್ಯಾನೇಜರ್ ನವ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ತಂಡದ ಸದಸ್ಯರು ಆಗಮಿಸಿ ಸಂಸ್ಥೆಗೆ ಶುಭಾಶಯಗಳನ್ನು ತಿಳಿಸಿದರು.