ಕುಂಬ್ರ: ಮೆಸ್ಕಾಂ ಗ್ರಾಮಾಂತರ, ನಗರ ಉಪ ವಿಭಾಗ ಮಟ್ಟದ ಜನಸಂಪರ್ಕ ಸಭೆ- ಹಳೆ ತಂತಿ ಬದಲಾವಣೆ * ಹೆಚ್ಚುವರಿ ಪರಿವರ್ತಕಗಳ ಅಳವಡಿಕೆ * ಪವರ್ ಮ್ಯಾನ್‌ಗಳ ಕೊರತೆ

0

ಪುತ್ತೂರು: ಮೆಸ್ಕಾಂ ಪುತ್ತೂರು ನಗರ ಉಪ ವಿಭಾಗ ಮತ್ತು ಪುತ್ತೂರು ಗ್ರಾಮಾಂತರ ಉಪ ವಿಭಾಗ ಮಟ್ಟದ ಜನ ಸಂಪರ್ಕ ಸಭೆಯು ಜು.15ರಂದು ಕುಂಬ್ರ ಗ್ರಾಮಾಂತರ ಉಪ ವಿಭಾಗದ ಕಛೇರಿಯಲ್ಲಿ ನಡೆಯಿತು. ಮೆಸ್ಕಾಂ ಮಂಗಳೂರು ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಕೆ.ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುತ್ತೂರು ಉಪ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ, ಗ್ರಾಮಾಂತರ ಉಪ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಎಚ್.ಶಿವಶಂಕರ್‌ರವರುಗಳು ಗ್ರಾಹಕರ ಬೇಡಿಕೆ, ಸಮಸ್ಯೆಗಳಿಗೆ ಉತ್ತರಿಸಿದರು. ವಿಶೇಷವಾಗಿ ಹಳೆಯ ವಿದ್ಯುತ್ ತಂತಿಗಳನ್ನು ಶೀಘ್ರವಾಗಿ ಬದಲಾವಣೆ ಮಾಡಬೇಕು ಅಲ್ಲದೆ ಕೆಲವೊಂದು ಕಡೆಗಳಲ್ಲಿ ಹೆಚ್ಚುವರಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವಂತೆ ಗ್ರಾಹಕರು ಸಭೆಯಲ್ಲಿ ತಮ್ಮ ಬೇಡಿಕೆಗಳನ್ನು ಇರಿಸಿದರು. ಇದಲ್ಲದೆ ಮೆಸ್ಕಾಂನಲ್ಲಿ ಪವರ್‌ಮ್ಯಾನ್‌ಗಳ ಕೊರತೆ ಇದ್ದು ಈ ಬಗ್ಗೆ ಇಲಾಖೆ ಗಂಭೀರವಾಗಿ ಪರಿಗಣಿಸುವಂತೆ ತಿಳಿಸಿದರು.

  • ವಿದ್ಯುತ್ ಸಲಹಾ ಸಮಿತಿಯ ಯೋಗೀಶ್ ಸಾಮಾನಿ ಕೋಡಿಂಬಾಡಿ, ಗಿರಿಶಂಕರ ಸುಲಾಯ ಸವಣೂರು, ಇಕ್ಬಾಲ್ ಹುಸೇನ್ ಕೌಡಿಚ್ಚಾರುರವರುಗಳು ಮಾತನಾಡಿ, ಮೆಸ್ಕಾಂನಲ್ಲಿ ಪವರ್ ಮ್ಯಾನ್‌ಗಳ ಕೊರತೆ ಬಹಳಷ್ಟು ಇದೆ. ಗ್ರಾಮಾಂತರ ಉಪ ವಿಭಾಗದಲ್ಲೂ ಶೇ.50 ರಷ್ಟು ಪವರ್‌ಮ್ಯಾನ್‌ಗಳ ಹುದ್ದೆ ಖಾಲಿ ಇದೆ ಇದರಿಂದ ಬಹಳಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಈ ಬಗ್ಗೆ ಮೆಸ್ಕಾಂ ಇಲಾಖೆ ಗಂಭೀರವಾಗಿ ಪರಿಗಣಿಸಿಕೊಂಡು ಸರಕಾರದ ಗಮನಕ್ಕೆ ತರುವಂತೆ ತಿಳಿಸಲಾಯಿತು. ಇದಕ್ಕೆ ಉತ್ತರಿಸಿದ ಕೃಷ್ಣರಾಜ್‌ರವರು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
  • ಬಹಳಷ್ಟು ಕಡೆಗಳಲ್ಲಿ ಅದರಲ್ಲೂ ಕೆಲವೊಂದು ಕಡೆಗಳಲ್ಲಿ ತೋಟದೊಳಗೆ ಹಾದು ಹೋಗಿರುವ ವಿದ್ಯುತ್ ತಂತಿಗಳು ಹಳೆಯದಾಗಿದ್ದು ಇಂತಹ ಹಳೆಯ ವಿದ್ಯುತ್ ತಂತಿಗಳನ್ನು ಶೀಘ್ರವಾಗಿ ಬದಲಾಯಿಸುವಂತೆ ಒಳಮೊಗ್ರು ಗ್ರಾಪಂ ಸದಸ್ಯ ಮಹೇಶ್ ರೈ ಕೇರಿ ಸೇರಿದಂತೆ ಹಲವು ಮಂದಿ ಗ್ರಾಹಕರು ಕೇಳಿಕೊಂಡರು. ಕೆಲವೊಂದು ಕಡೆಗಳಲ್ಲಿ ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸುವಂತೆಯೂ ಬೇಡಿಕೆ ಬಂತು. ಗ್ರಾಹಕರ ಬೇಡಿಕೆ, ಸಮಸ್ಯೆಗಳನ್ನು ದಾಖಲಿಸಿಕೊಳ್ಳಲಾಯಿತು.

  • ಸಭೆಯಲ್ಲಿ ಎ.ಶ್ರೀಧರ ಪಾಲ್ತಾಡಿ, ಅಣ್ಣಪ್ಪ ನಾಯ್ಕ, ಐತ್ತಪ್ಪ ಪೇರತ್ತಡ್ಕ, ಅಬ್ದುಲ್ ಅಝೀಜ್, ಕರುಣಾಕರ ಗೌಡ ಪಾಲ್ತಾಡಿ, ಕೇಶವ ಕೊಡಿಪ್ಪಾಡಿ, ಪದ್ಮಪ್ರಸಾದ್ ಜೈನ್,ಸೌಮ್ಯ ಎಂ, ಭರತ್ ಕೆ, ಪ್ರಕಾಶ್, ಅಬ್ದುಲ್ ಖಾದರ್ ಉಪ್ಪಿನಂಗಡಿ, ಮೋನಪ್ಪ ಗೌಡ ಬೆಳ್ಳಿಪ್ಪಾಡಿ, ಹರಿಣಾಕ್ಷಿ, ಜಯಂತಿ ಬಲ್ನಾಡು, ಚಂದ್ರಕಲಾ ನರಿಮೊಗರು, ಚಂದ್ರಾವತಿ ರೈ ಕೆದಂಬಾಡಿ, ದಶರತ್ ರೈ, ಹರೀಂದ್ರನಾಥ ರೈ ದೋಳ್ಪಾಡಿ, ಪ್ರವೀಣ್ ಡಿಂಬ್ರಿ ದೋಳ, ಇಂದಿರಾ ಬಿ.ಕೆ, ಪ್ರವೀಣ್ ಕುಮಾರ್ ಚೆನ್ನಾವರ, ರಾಧಾಕೃಷ್ಣ ರೆಂಜಲಾಡಿ,ಮೋನಪ್ಪ ಪೂಜಾರಿ ಕೆರೆಮಾರು,ಅಮರನಾಥ ಆಳ್ವ ಸೇರಿದಂತೆ ಮೆಸ್ಕಾಂ ಸಲಹಾ ಸಮಿತಿ ಸದಸ್ಯರುಗಳು, ವಿದ್ಯುತ್ ಬಳಕೆದಾರರು ಉಪಸ್ಥಿತರಿದ್ದರು. ಮೆಸ್ಕಾಂ ಸಹಾಯಕ ಇಂಜಿನಿಯರ್ ಗುರುದೇವಿ ಮಂತ್ರಣ್ಣನವರ್, ನಗರ ಉಪ ವಿಭಾಗದ ಸಹಾಯಕ ಇಂಜಿನಿಯರ್ ಸ್ಮಿತಾ ಕೆ.ಎ, ಕಿರಿಯ ಸಹಾಯಕ ಇಂಜಿನಿಯರ್‌ಗಳಾದ ರವೀಂದ್ರ ಎಮ್, ರಜಿನಿ, ಪುತ್ತು ಜೆ,ರಮೇಶ ಕೆ, ರಾಜೇಶ್ ಕುಮಾರ್ ಕೆ.ವಿ, ಕೃಷ್ಣಮೂರ್ತಿ ಕೆ,ವೀರ ನಾಯ್ಕ, ರಮೇಶ್ ಬಿ, ರಾಜೇಶ್ ಕೆ, ಸಹಕರಿಸಿದ್ದರು. ಗ್ರಾಮಾಂತರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಎಚ್.ಶಿವಶಂಕರ್‌ರವರು ಸ್ವಾಗತಿಸಿ, ವಂದಿಸಿದರು.

  • 32 ಸಾವಿರ ಕಿಲೋ ಮೀಟರ್ ವಿದ್ಯುತ್ ತಂತಿ…!
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 32 ಸಾವಿರ ಕಿಲೋ ಮೀಟರ್ ಉದ್ದಕ್ಕೆ ವಿದ್ಯುತ್ ತಂತಿ ಇದೆ. ಇದರ ನಿರ್ವಹಣೆ ಆಗಬೇಕಿದೆ. ಗ್ರಾಹಕರಿಂದ ಬಂದಿರುವ ಬೇಡಿಕೆ, ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಇಲಾಖೆಯಿಂದ ಆಗಬೇಕಾದ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ವಿದ್ಯುತ್ ಅತೀ ಮುಖ್ಯವಾಗಲಿದೆ. ವಿದ್ಯುತ್ ಇಲ್ಲದಿದ್ದರೆ ಕುಡಿಯಲು ನೀರಿಲ್ಲದ ಪರಿಸ್ಥಿತಿಗೆ ಬರಲಿದ್ದೇವೆ. ಆದ್ದರಿಂದ ವಿದ್ಯುತ್ತಿನ ಮಿತವಾದ ಬಳಕೆ ನಮ್ಮದಾಗಬೇಕು ಎಂದು ಮೆಸ್ಕಾಂ ಮಂಗಳೂರು ಸಹಾಯಕ ಇಂಜಿನಿಯರ್ ಕೃಷ್ಣರಾಜ್ ಕೆ.ತಿಳಿಸಿದರು.

  • ಶಾಸಕರು ಏರ್ಪಡಿಸಿದ್ದ ಕಂಬ ಹತ್ತುವ ತರಬೇತಿಯಿಂದ ಬಹಳಷ್ಟು ಪ್ರಯೋಜನವಾಗಿದೆ
    ರೈ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಸಕರಾದ ಅಶೋಕ್ ಕುಮಾರ್ ರೈಯವರು ಕೊಂಬೆಟ್ಟುನಲ್ಲಿ ಏರ್ಪಡಿಸಿದ್ದ ಕಂಬ ಹತ್ತುವ ತರಬೇತಿಯಿಂದ ನಮಗೆ ಬಹಳಷ್ಟು ಪ್ರಯೋಜನವಾಗಿದೆ. ಪವರ್‌ಮ್ಯಾನ್‌ಗಳು ನಿರ್ವಹಿಸುವ ಬಹಳಷ್ಟು ವಿಷಯಗಳನ್ನು ಕಲಿತುಕೊಂಡಿದ್ದೇವೆ ಎಂದು ಮೆಸ್ಕಾಂ ಸಲಹಾ ಸಮಿತಿಯ ಸದಸ್ಯ ಯೋಗೀಶ್ ಸಾಮಾನಿ ಕೋಡಿಂಬಾಡಿಯವರು ಹೇಳಿದರು. ಮೆಸ್ಕಾಂನವರೊಂದಿಗೆ ನಾವು ಕೂಡ ಸಹಕಾರ ನೀಡುತ್ತಿದ್ದೇವೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here