ಪುತ್ತೂರು: ಬನ್ನೂರು ಅಲುಂಬುಡ ಎವಿಜಿ ಇಂಗ್ಲೀಷ್ ಮೀಡಿಯಂ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಸೌಮ್ಯಶ್ರೀ ಅವರು ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಚಿದಾನಂದ ರೈ, ಕಾರ್ಯದರ್ಶಿಯಾಗಿ ಸಂಸ್ಥೆಯ ಮುಖ್ಯೋಪಾದ್ಯಾಯ ಅಮರ್‌ನಾಥ್ ಬಿ.ಪಿ ಅವರು ಆಯ್ಕೆಗೊಂಡಿದ್ದಾರೆ.

ಜು.12ರಂದು ಶಾಲೆಯ ವಠಾರದಲ್ಲಿ ನಡೆದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರಶ್ಮಿ, ನಯನ, ನವೀನ್, ಅನುಪಮಾ, ದಿವ್ಯಶ್ರೀ ಹೆಗಡೆ, ಸವಿತಾ, ಶೇಖರ ಮತ್ತು ಶಿಕ್ಷಕರ ಪ್ರತಿನಿಧಿಯಾಗಿ ಶಿಕ್ಷಕಿಯಾದ ಸವಿತಾ ಕೆ ರವರನ್ನು ಆಯ್ಕೆ ಮಾಡಲಾಯಿತು. ಆಯ್ಕೆಯ ಸಂದರ್ಭದಲ್ಲಿ ಶಾಲಾ ಮಂಡಳಿಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ, ಸಂಚಾಲಕ ಎ ವಿ ನಾರಾಯಣ ಹಾಗೂ ಶಾಲಾ ಆಡಳಿತ ಅಧಿಕಾರಿ ಗುಡ್ಡಪ್ಪ ಗೌಡ ಬಲ್ಯ ಹಾಗೂ ಎಲ್ಲಾ ಶಿಕ್ಷಕ ವೃಂದ ಹಾಗೂ ಪೋಷಕ ವೃಂದದವರು ಪಾಲ್ಗೊಂಡಿದ್ದರು.