ಪುತ್ತೂರು: ಈಶ್ವರಮಂಗಲ ಶ್ರೀವರಮಹಾಲಕ್ಮೀ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆಯು ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶ್ರೀಪಂಚಲಿಂಗೇಶ್ವರ ಶ್ರೀವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷ ರತೀ ರಮೇಶ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಿವೃತ್ತ ಶಿಕ್ಷಕ ಅಚ್ಚುತ ಮಣಿಯಾಣಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಶ್ರೀವರಮಹಾಲಕ್ಷ್ಮೀ ಪೂಜಾ ಸಮಿತಿಯ ಗೌರವಾಧ್ಯಕ್ಷ ಸರೋಜಿನಿ ನಾಗಪ್ಪಯ್ಯ, ಕಾರ್ಯದರ್ಶಿ ಅರುಣಾ ಸತೀಶ್ ಶೆಟ್ಟಿ ಮುಂಡ್ಯ, ಖಜಾಂಜಿ ಮೋಹನಾಂಗಿ ಕೆ.ಬಿ, ಕಾರ್ಯಧ್ಯಕ್ಷ ರತಿ ಕೊರಗಪ್ಪ ರೈ ಸುರುಳಿಮೂಲೆ, ಜೊತೆ ಕಾರ್ಯದರ್ಶಿ ಕೋಮಲ ಕೃಷ್ಣಪ್ಪ ಗೌಡ ನೀರಳಿಕೆ, ಸಂಘಟನಾ ಕಾರ್ಯದರ್ಶಿ ಸೇವಂತಿ ಮಡ್ಯಲಮಜಲು, ಉಪಾಧ್ಯಕ್ಷ ಮೇಘ ಯತೀಶ್ ಕತ್ರಿಬೈಲು, ಶ್ರೀಪಂಚಲಿಂಗೇಶ್ವರ ಶ್ರೀವರಮಹಾಲಕ್ಷ್ಮೀ ಪೂಜಾ ಸಮಿತಿಯ ಗೌರವ ಸಲಹೆಗಾರ ರವಿಕಿರಣ್ ಶೆಟ್ಟಿ ಬೆದ್ರಾಡಿ, ರಾಮ ಮೇನಾಲ, ಸುಭಾಶ್ಚಂದ್ರ ರೈ, ಪೂರ್ಣಚಂದ್ರ ರೈ ನೆಲ್ಲಿತ್ತಡ್ಕ, ಕಾರ್ಯಕಾರಿ ಸಮಿತಿಯ ಸದಸ್ಯರಾದ ವೇದಾವತಿ ಸುಭಾಶ್ಚಂದ್ರ ರೈ ಮೈರೋಳು, ಸವಿತಾ ಮೋಹನ್ ರೈ ನೆಲ್ಲಿತ್ತಡ್ಕ, ದೀಪಿಕಾ ಗಿರೀಶ್ ರೈ ಮರಕಡ, ಭವ್ಯ ರಾಜೇಶ್ ಅರ್ತಿಯಡ್ಕ, ಗಾಯತ್ರಿ ಚಂದ್ರಶೇಖರ ಗೌಡ ಕತ್ರಿಬೈಲು, ವಸಂತಿ ಕುಶಾಲಪ್ಪ ಗೌಡ ಪಟ್ರೋಡಿ, ವಿನೋದ ಜಯರಾಮ ರೈ ಪುಳಿತ್ತಡಿ ಮೋದಲಾದವರು ಉಪಸ್ಥಿತರಿದ್ದರು.
