ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನಕ್ಕೆ ನೂತನವಾಗಿ ನಿರ್ಮಾಣವಾಗಲಿರುವ ಧ್ವಜಸ್ತಂಭಕ್ಕೆ ಬೇಕಾದ ಮರವನ್ನು ಉಪ್ಪಿನಂಗಡಿ ಸಮೀಪದ ಪಾತಾಳದಿಂದ ದೇವಸ್ಥಾನದ ತನಕ ವಾಹನ ಜಾಥಾ, ಭವ್ಯ ಮೆರವಣಿಗೆ ಮೂಲಕ ಜು.16ರಂದು ದೇವಸ್ಥಾನಕ್ಕೆ ತರಲಾಯಿತು.



ಉಪ್ಪಿನಂಗಡಿ ಸಮೀಪದ ನಿನ್ನಿಕಲ್(ಪಾತಾಳ)ನಿವಾಸಿ ವೆಂಕಟ್ರಮಣ ಭಟ್ ಹಾಗೂ ಅವರ ಪುತ್ರರಾದ ಅಂಬಾ ಪ್ರಸಾದ್ ಪಾತಾಳ, ಶ್ರೀರಾಮ ಪಾತಾಳ ಅವರು ದಾನವಾಗಿ ನೀಡಿದ ಮರಕ್ಕೆ ಜು.13ರಂದು ಕೆಮ್ಮಿಂಜೆ ನಾಗೇಶ್ ತಂತ್ರಿಯವರ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಗಿತ್ತು. ಜು.16ರಂದು ಬೆಳಿಗ್ಗೆ ಪಾತಾಳದಿಂದ ವಾಹನ ಜಾಥಾ ಮೂಲಕ ಆಗಮಿಸಿದ ಮರಕ್ಕೆ ಕೊಯಿಲ ಗ್ರಾಮದ ಗೋಕುಲನಗರದಲ್ಲಿ ಭಕ್ತರು ಸ್ವಾಗತ ಕೋರಿದರು. ಬಳಿಕ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈ ಹಾಗೂ ಕೊಯಿಲ ಜಾನುವಾರು ಸಂವರ್ದನ ಕೇಂದ್ರದ ನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ಅವರು ತೆಂಗಿನಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಚೆಂಡೆ, ವಾದ್ಯಗಳೊಂದಿಗೆ ಕಾಲ್ನಡಿಗೆಯಲ್ಲಿ ಭವ್ಯ ಮೆರವಣಿಗೆ ಮೂಲಕ ಕೊಡಿಮರವನ್ನು ದೇವಸ್ಥಾನಕ್ಕೆ ತರಲಾಯಿತು. ದೇವಸ್ಥಾನದ ವಠಾರದಲ್ಲಿ ದೇವಸ್ಥಾನದ ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯ ಅವರು ಕೊಡಿಮರಕ್ಕೆ ಪೂಜಾ ವಿಧಿವಿಧಾನ ನೆರವೇರಿಸಿದರು. ದೇವಸ್ಥಾನದ ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ಸಹಕರಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್ ಕುಮಾರ್ ರೈ ಅರುವಾರಬಾಳಿಕೆ, ಸದಸ್ಯರಾದ ಯತೀಶ್ ಗುಂಡಿಜೆ, ಸುನೀತ್‌ರಾಜ್ ಶೆಟ್ಟಿ ಬಂತೆಜಾಲು, ಶ್ರೀಧರ ಪೂಜಾರಿ ತುಂಬೆತ್ತಡ್ಕ, ಸಂಜೀವ ಸುದೆಂಗಳ, ಗೋಪಾಲ ನಾಯ್ಕ್ ಸಿಗೆತ್ತಡಿ, ಸುಜಾತ ಜೆ.ಶೆಟ್ಟಿ ಬಡಿಲ, ಮೀನಾಕ್ಷಿ ಕೆ.ಮುಂಡೈಮಾರ್, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಅಭಿವೃದ್ಧಿ ಸಮಿತಿ ಸಲಹೆಗಾರ ಕೇಶವ ಅಮೈ ಕಲಾಯಿಗುತ್ತು, ಉತ್ಸವ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಕೊರಿಕ್ಕಾರು, ಉಪಾಧ್ಯಕ್ಷರಾದ ಪಾಂಡೇಲುಗುತ್ತು ಚಂದ್ರಹಾಸ ರೈ ಬುಡಲೂರು, ರಾಜೀವ ಗೌಡ ಹೊಸಲಕ್ಕೆ, ಮೋಹನದಾಸ್ ಶೆಟ್ಟಿ ಬಡಿಲ, ಮುರಳಿಕೃಷ್ಣ ಬಡಿಲ, ಪ್ರಧಾನ ಕಾರ್ಯದರ್ಶಿ ವಿನೋದ್‌ಕುಮಾರ್ ಪಲ್ಲಡ್ಕ, ಕಾರ್ಯದರ್ಶಿ ಶಾಂತರಾಮ ಗೌಡ ಬೇಂಗದಪಡ್ಪು, ಕಾರ್ಯಕಾರಿ ಸಮಿತಿ ಸದಸ್ಯರಾದ ಕೊರಗಪ್ಪ ಗೌಡ ಮುಂಡೈಮಾರ್, ಶ್ರೀನಿವಾಸ ಗೌಡ ಪಲ್ಲಡ್ಕಪಟ್ಟೆ, ವಿಶ್ವನಾಥ ಗೌಡ ಪುತ್ಯೆ, ರಘುನಾಥ ಶೆಟ್ಟಿ ಕಲ್ಕಾಡಿ, ಸೋಮನಾಥ ಗೌಡ ಪಲ್ಲಡ್ಕ, ಶ್ರೀರಾಮ ಕೆಮ್ಮಾರ, ವಸಂತಕುಮಾರ್ ಪೊಸಲಕ್ಕೆ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಉಪಾಧ್ಯಕ್ಷರಾದ ಜಗನ್ನಾಥ ಶೆಟ್ಟಿ ಕಾರೆಗುಡ್ಡೆ, ಭವಾನಿಶಂಕರ್ ಪರಂಗಾಜೆ, ರಾಮನಾಯ್ಕ ಏಣಿತ್ತಡ್ಕ, ಬಾಲಕೃಷ್ಣ ಗೌಡ ಬೇಂಗದಪಡ್ಪು, ಸದಸ್ಯರಾದ ರಾಮಯ್ಯ ಗೌಡ ಬುಡಲೂರು, ಸುಭಾಶ್ ಶೆಟ್ಟಿ ಆರುವಾರ, ಸುಧೀಶ ಪಟ್ಟೆಪಲ್ಲಡ್ಕ, ದಿನೇಶ್ ಗೌಡ ಊರಾಜೆ, ಸುಂದರ ಕೋರಿಕ್ಕಾರು, ಲಕ್ಷ್ಮೀನಾರಾಯಣ ರಾವ್ ಆತೂರು, ಅಶೋಕ್ ಗೋಕುಲನಗರ, ಕಾರ್ಯದರ್ಶಿ ಶಶಿಕುಮಾರ್ ಅಂಬಾ, ಕೊಯಿಲ ಗ್ರಾ.ಪಂ ಅಧ್ಯಕ್ಷೆ ಪುಷ್ಪಾಸುಭಾಷ್ ಶೆಟ್ಟಿ, ಮಾಜಿ ಅಧ್ಯಕ್ಷೆ ಹೇಮಾಮೋಹನ್‌ದಾಸ್ ಶೆಟ್ಟಿ, ಶಿಲ್ಪಿ ಉಮೇಶ್ ಆಚಾರ್ಯ, ಸಂಜೀವ ಗೌಡ ಪರಂಗಾಜೆ, ಅಶ್ವಿನಿ ಅಂಬಾ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ವಿನಯಕುಮಾರ್, ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಕರುಣಾಕರ ದೊಡ್ಡಉರ್ಕ, ರಾಮಕುಂಜ ಗ್ರಾ.ಪಂ.ಸದಸ್ಯ ಯತೀಶ್ ಬಾನಡ್ಕ ಸೇರಿದಂತೆ ದೇವಸ್ಥಾನದ ಎಲ್ಲಾ ಉಪಸಮಿತಿಗಳ ಪದಾಧಿಕಾರಿಗಳು, ಭಕ್ತಾದಿಗಳು ಪಾಲ್ಗೊಂಡಿದ್ದರು.