ಪುತ್ತೂರು: ರೈ ಎಸ್ಟೇಟ್ಸ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಪುತ್ತೂರು ಮತ್ತು ಐ.ಎ.ಎಸ್ ದರ್ಶನ ಸಂಸ್ಥೆ ಇದರ ಸಹಯೋಗದಲ್ಲಿ ಐ.ಪಿ.ಎಸ್, ಐ.ಎ.ಎಸ್, ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಆನ್ ಲೈನ್ ಕೋಚಿಂಗ್ ತರಬೇತಿಯ ಉಚಿತ ಮಾಹಿತಿ ಕಾರ್ಯಾಗಾರ ಪುತ್ತೂರು ಜನಪ್ರಿಯ ಶಾಸಕ ಅಶೋಕ್ ಕುಮಾರ್ ರೈ ಯವರ ಸಾರಥ್ಯದಲ್ಲಿ ಜು.20ರಂದು ಪುತ್ತೂರು ಶಾಸಕರ ಕಛೇರಿ ಸಭಾಂಗಣದಲ್ಲಿ ಬೆಳಿಗ್ಗೆ ಗಂಟೆ 9.30ಕ್ಕೆ ಆಯೋಜಿಸಲಾಗಿದೆ.
ದೇಶದ ಆಡಾಳಿತಾತ್ಮಕ ಉನ್ನತ ಹುದ್ದೆಯ ಕನಸು ಹೊತ್ತಿರುವ ವಿದ್ಯಾರ್ಥಿಗಳು ಪಿಯುಸಿ ಪಾಸ್ ಮತ್ತು ಯಾವುದೇ ಪದವಿ ಪಡೆಯುತ್ತಿರುವ ಮತ್ತು ಪದವಿ ಮುಗಿಸಿರುವ ವಿದ್ಯಾರ್ಥಿ ಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು.
ಈ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಲು ಈಗಾಗಲೇ ನೋಂದಾಯಿಸಿ ಕೊಂಡವರು ಮತ್ತು ನೋಂದಾಯಿಸಿ ಕೊಳ್ಳದವರು ಭಾಗವಹಿಸಬಹುದು. ಹೆಸರು ನೋಂದಾಯಿಸಿಕೊಳ್ಳದವರು ಈ ಕೆಳಗಿನ ದೂರವಾಣಿ ನಂಬರಿಗೆ ಕರೆಮಾಡಿ ಕೂಡಲೇ ನೋಂದಾಯಿಸಿಕೊಳ್ಳಬಹುದು ಎಂದು ರೈ ಎಸ್ಟೇಟ್ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಆರ್.ಶೆಟ್ಟಿ ತಿಳಿಸಿದ್ದಾರೆ.
ದೂರವಾಣಿ ಸಂಖೈ: 8904707969 , 9449663719