ಪುತ್ತೂರು: ತುಳುನಾಡಿನ ಆಟಿ ತಿಂಗಳಿನ ವಿಶೇಷ ತಿನಿಸುಗಳಾದ ಪತ್ರೊಡೆ ಪ್ರೈ, ಮಸಾಲ ಪತ್ರೊಡೆ, ತಂಜಾಕ್ ವಡೆ, ತಂಜಾಕ್ ಪತ್ರೊಡೆ, ಹಪಸಿನ ಗಟ್ಟಿ, ಕಣಿಲೆ ತಿನಿಸುಗಳು , ಮಬಡೆ ಉಪ್ಪಿನಕಾಯಿ , ಹಲಸಿನ ಬೀಜದ ಉಪ್ಪಿನಕಾಯಿ , ಅರಸಿನ ಎಲೆಯ ಗಟ್ಟಿ , ಹಲಸಿನ ಸೊಳೆ ಇಷ್ಟೇಯಲ್ಲದೇ , ಬರೀ ಚರುಂಬುರಿ ತಿನಿಸುಗಳ ತಯಾರಿಕೆಯಲ್ಲಿ ಸುಮಾರು 50 ವರ್ಷಗಳ ಅನುಭವ ಹೊಂದಿರುವ ಶ್ರೀನಿವಾಸ್ ಪ್ರಭು ವಾಮದಪದವು ಇವರ ಕೈ ರುಚಿಯಿಂದ ತಯಾರಾದ ಘಮ ಘಮಿಸುವ ಚರುಂಬುರಿ , ರಾಜ ಸ್ಪೆಷಲ್ , ಗೋಬಿ ಮಂಚೂರಿ , ನಿಪ್ಪಟ್ ಮಸಾಲ , ಮೂಂಗ್ ಸ್ಟ್ರಾಟ್ಸ್ ಮಸಾಲ ,ಪಾನಿಪೂರಿ ಮತ್ತು ದಹಿ ಪೂರಿ ಈ ಎಲ್ಲಾ ತಿನಿಸುಗಳ ಮಳಿಗೆ ದಿ.ಸುಧಾಕರ ಪ್ರಭು ಇವರ ಕಿರಿಯ ಸಹೋದರ ಹರೀಶ್ ಪ್ರಭು ಇವರ ಮಾಲೀಕತ್ವದ ಪ್ರಭು ಚರುಂಬುರಿ ಹೌಸ್ ಬೊಳುವಾರು ವೃತ್ತ ಬಳಿಯ ಸಂಕೀರ್ಣದಲ್ಲಿ ಜು.18 ರಂದು ಮತ್ತೆ ಶುಭಾರಂಭಗೊಂಡಿತ್ತು.


ಪುರೋಹಿತ ಜಯರಾಮ್ ಭಟ್ ಮೂರ್ಕಾಜೆ ಬಳಗ ಧಾರ್ಮಿಕ ಕೈಂಕರ್ಯ ನೆರವೇರಿಸಿ, ಶ್ರೇಯೋಭಿವೃದ್ದಿಗೆ ಹರಸಿದರು. ನಗರ ಸಭಾ ಸದಸ್ಯ ಸುಂದರ ಪೂಜಾರಿ ಬಡಾವು ದೀಪ ಪ್ರಜ್ವಲನೆ ನೆರವೇರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಮಾಲೀಕರ ಮಾತೃಶ್ರೀ ಶಾರದಾ ಪ್ರಭು ಕೆಮ್ಮಾಯಿ, ಶೋಭಿತಾ ಪ್ರಭು, ಸ್ವರೂಪ್ ಹಾಗೂ ಸಾನಿಧ್ಯ, ಸತೀಶ್ ಪ್ರಭು, ಬೊಳುವಾರು ಪಿ ಅಪ್ಪಣ ಪ್ರಭು ದಿನಸಿ ಮಳಿಗೆಯ ಮಧುವೀರ್ ಪ್ರಭು, ವಿವೇಕ್ ಪ್ರಭು ಮತ್ತು ರಘವೀರ್ ಪ್ರಭು, ಪ್ರಥಮ ಗ್ರಾಹಕ ಗೋಪಾಲಕೃಷ್ಣ, ಗಿರೀಶ್ ಪಡ್ಡಾಯೂರು, ಮದಗ ಸ್ವೀಟ್ಸ್ ನ ಆನಂದ್, ಸುಶ್ಮಿತಾ ಟೈಲರಿಂಗ್ ನ ದಯಾನಂದ ಹೆಗ್ಡೆ , ಕರುಣಾಕರ್ , ಗಣೇಶ್ , ಆನಂದ್ , ತೀರ್ಥಕ್ಷಾ , ಬಾಲಕೃಷ್ಣ , ತೀರ್ಥಾಕ್ಷಾ ಕೆ , ಗೋಪಾಲಕೃಷ್ಣ , ಅರುಣ್ ಸಹಿತ ಹಲವರು ಅತಿಥಿಗಳು ಆಗಮಿಸಿ ಶುಭಕೋರಿದರು.
ಆ ಬಳಿಕ ತನ್ನ ಸೋದರಮಾವ ಶ್ರೀನಿವಾಸ ಪ್ರಭು ವಾಮದಪದವು ಇವರನ್ನು ಅತಿಥಿಗಳ ಮುಖೇನ ಸನ್ಮಾನಿಸಲಾಯಿತು.

ಸುಮಾರು 30 ವರುಷಗಳಿಂದ ಚರುಂಬುರಿ ಸಹಿತ ವಿವಿಧ ಬಗೆಯ ತುಳುನಾಡಿನ ಪ್ರಮುಖ ತಿಂಡಿ -ತಿನಿಸುಗಳನ್ನು ಎರಡು ತಿಂಗಳಿನ ಬಳಿಕ ಮತ್ತೆ ಬೊಳುವಾರಿನಲ್ಲಿ ಆರಂಭಿಸಿದ್ದೇವೆ. ಇನ್ನು ಶಾಲಾ ಮಕ್ಕಳಿಗಂತೂ ವಿಶೇಷ ದರ ನಿಗದಿ ಪಡಿಸಿದ್ದೇವೆ.ನಿಮ್ಮೆಲರ ಸಹಕಾರ , ಬೆಂಬಲ ಹಿಂದಿನಂತೆಯೇ ಇರಲಿ…
ಹರೀಶ್ ಪ್ರಭು ,
ಪ್ರಭು ಚರುಂಬುರಿ , ಬೊಳುವಾರು.