ಪುತ್ತೂರು: ಸಂತ ಫಿಲೋಮಿನಾ ವಿದ್ಯಾಸಂಸ್ಥೆ ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಫಿಲೋಮಿನಾ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ದರ್ಬೆ ವಿನಾಯಕ ನಗರದಲ್ಲಿ ನಡೆಯುವ 43ನೇ ವರ್ಷದ ಗಣೇಶೋತ್ಸವ ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಜು.16 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ವಿ.ಎಸ್ ಭಟ್ ರವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಪ್ರಕಾಶ್ ಮುಕ್ರಂಪಾಡಿ, ಕಾರ್ಯದರ್ಶಿ ಶಿವಪ್ರಸಾದ್, ಕೋಶಾಧಿಕಾರಿ ದುರ್ಗಾಪ್ರಸಾದ್, ಹಿರಿಯ ವಿದ್ಯಾರ್ಥಿ ಮಿತ್ರರಾದ ಸುಕುಮಾರ್ ಪರ್ಲಡ್ಕ, ಪ್ರಜ್ವಲ್ ಮುಕ್ರಂಪಾಡಿ, ಆಶ್ಲೇಶ್, ರಿತೇಂದ್ರ, ವಿದ್ಯಾರ್ಥಿ ಸಮಿತಿ ಅಧ್ಯಕ್ಷ ಅನ್ವೇಶ್ ರೈ, ಸೂರಜ್ ನಂದಾ, ರಚಿತಾ ಆರ್.ಕಲ್ಲಾರೆ, ಅಭಿರಾಮ, ಮನ್ವಿತ್ ಜಿ, ವಿಷ್ಣುಪ್ರಕಾಶ್ ಎಸ್, ಪ್ರತೀಕ್ಷಾ, ಆಕಾಶ್ ರೈ, ಶ್ರವಣ್ ಡಿ, ಆಕಾಶ್ ಜೆ.ಸಿ ನಾಯಕ್, ಪ್ರಥ್ವಿ ಕೆ, ಕೀರ್ತನ್ ಸಿ, ಅಭಿಜಿತ್, ವರ್ಷಾ, ದಿವ್ಯಾ ಉಪಸ್ಥಿತರಿದ್ದರು.