ಕುಕ್ಕೆ: ಶ್ರೀ ಕ್ಷೇತ್ರದಲ್ಲಿ ಜಾತ್ರಾ ಪ್ರಯುಕ್ತ ರಥಗಳಿಗೆ ಗೂಟ ಪೂಜಾ ಮುಹೂರ್ತ

0

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸಂದರ್ಭ ಎಳೆಯುವ ರಥಗಳಿಗೆ ಗೂಟ ಪೂಜಾ ಮುಹೂರ್ತ ಬುಧವಾರ ನೆರವೇರಿತು.

ಶ್ರೀ ದೇಗುಲದಲ್ಲಿ ಪೂಜೆ ನೆರವೇರಿದ ಬಳಿಕ ಜಾತ್ರಾ ಸಮಯದಲ್ಲಿ ಎಳೆಯುವ ಬ್ರಹ್ಮರಥ ಮತ್ತು ಪಂಚಮಿ ರಥಗಳನ್ನು ನಿರ್ಮಿಸಲು ಕಾರ್ತಿಕ ಹುಣ್ಣಿಮೆಯ ದಿನವಾದ ಬುಧವಾರ ಗೂಟ ಪೂಜಾ ಮುಹೂರ್ತವನ್ನು ವಿವಿಧ ವೈಧಿಕ ವಿಧಾನಗಳೊಂದಿಗೆ ಕ್ಷೇತ್ರ ಪುರೋಹಿತ ಮದುಸೂಧನ ಕಲ್ಲೂರಾಯರು ನೆರವೇರಿಸಿದರು. ಬಳಿಕ ರಥಗಳ ಗೂಟಗಳಿಗೆ ಪೂಜೆ ಮಾಡಿದರು.

ಆರಂಭದಲ್ಲಿ ಬ್ರಹ್ಮರಥಕ್ಕೆ ಅಳವಡಿಸುವ ಗೂಟಗಳಿಗೆ ಪೂಜೆ ನೆರವೇರಿಸಿದರು. ಬಳಿಕ ಪಂಚಮಿ ರಥದ ಗೂಟಗಳಿಗೆ ಪೂಜೆ ನಡೆಯಿತು. ನಂತರ ಪುರೋಹಿತರು ಪೂರ್ವಶಿಷ್ಟ ಸಂಪ್ರದಾಯದಂತೆ ರಥ ಕಟ್ಟಲಿರುವ ಮೂಲನಿವಾಸಿ ಮಲೆಕುಡಿಯ ಜನಾಂಗದ ಗುರಿಕಾರರಿಗೆ ರಥ ಕಟ್ಟಲು ಪ್ರಸಾದ ರೂಪದಲ್ಲಿ ವೀಳ್ಯವನ್ನು ನೀಡಿದರು. ಅಲ್ಲದೆ ಇತರರಿಗೆ ಪ್ರಸಾದ ನೀಡಿದರು. ನಂತರ ಮೂಲನಿವಾಸಿ ಮಲೆಕುಡಿಯ ಜನಾಂಗದವರು ಬ್ರಹ್ಮರಥ ಮತ್ತು ಪಂಚಮಿ ರಥಕ್ಕೆ ಗೂಟ ನೆಡುವ ಕೈಂಕರ್ಯ ನೆರವೇರಿಸಿದರು.

 ಈ ಸಂದರ್ಭ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಯೇಸುರಾಜ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಸೌಮ್ಯಾ ಭರತ್, ಅಜಿತ್ ಕುಮಾರ್, ಲೀಲಾ ಮನಮೋಹನ್, ಪ್ರವೀಣ ರೈ ಮರುವಂಜ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಪವನ್ ಎಂ.ಡಿ, ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಅಚ್ಯುತ್ತ ಗೌಡ ಬಳ್ಪ, ಕಚೇರಿ ಅಧೀಕ್ಷಕ ಕೆ.ಎಂ.ಗೋಪಿನಾಥ್ ನಂಬೀಶ, ಶಿಷ್ಠಾಚಾರ ಅಧಿಕಾರಿ ಜಯರಾಮ ರಾವ್, ಹೆಬ್ಬಾರ್ ಪ್ರಸನ್ನ ಭಟ್, ದೇವಳದ ಪಾಟಾಳಿ ಲೋಕೇಶ್ ಎ.ಆರ್, ಮೂಲನಿವಾಸಿ ಮಲೆಕುಡಿಯ ಜನಾಂಗದ ಗುರಿಕಾರ ಚಂದ್ರಶೇಖರ ಕೋಡಿಕಜೆ, ಹಿರಿಯರಾದ ವೇದ ಮಲೆ, ಎ.ವಿ.ನಾಗೇಶ್, ಮೋಂಟ ಮಲೆ, ಚನಿಯಪ್ಪ ಮಲೆ,ಎ.ವಿ.ನಾರಾಯಣ ಮಲೆ, ಶಿವಕುಮಾರ್ ಅರ್ಗುಡಿ,ಪ್ರಮುಖರಾದ ಭಾಸ್ಕರ ಅರ್ಗುಡಿ, ರೋಹಿತಾಕ್ಷ, ಎ.ಎನ್.ಜಗದೀಶ್, ದಿನಕರ, ಶ್ರೇಯಸ್, ಧನುಷ್, ಪದ್ಮಯ್ಯ ಸೇರಿದಂತೆ ರಥಕಟ್ಟುವ ಮೂಲ ನಿವಾಸಿ ಮಲೆಕುಡಿಯ ಜನಾಂಗದ 60 ಯುವಕರು ಮತ್ತು ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here