ಕಡಬ: ಹಲ್ಲೆ ಆರೋಪ-ಗಾಯಾಳು ಆಸ್ಪತ್ರೆಗೆ ದಾಖಲು

0

ಕಡಬ: ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಆಟೋ ರಿಕ್ಷಾ ಚಾಲಕ, ಕುಟ್ರಪ್ಪಾಡಿ ನಿವಾಸಿ ಜಗನ್ನಾಥ ಶೆಟ್ಟಿ (43ವ.)ಎಂಬವರು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಗನ್ನಾಥ ಶೆಟ್ಟಿಯವರು ಸ್ವಂತ ರಿಕ್ಷಾ ಹೊಂದಿದ್ದು ಕಡಬ ಪೇಟೆಯಲ್ಲಿ ಬಾಡಿಗೆ ಮಾಡುತ್ತಿದ್ದು ಅವರ ಪತ್ನಿ ಕಡಬ ಗ್ರಾಮದ ಮುಳಿಮಜಲು ಎಂಬಲ್ಲಿ ಗೂಡಂಗಡಿ ಹೊಂದಿದ್ದಾರೆ. ಪತ್ನಿಯನ್ನು ಕರೆತರಲೆಂದು ಜು.19ರಂದು ರಾತ್ರಿ 8 ಗಂಟೆಗೆ ಮುಳಿಮಜಲುನಲ್ಲಿರುವ ಅಂಗಡಿಗೆ ತಲುಪಿ ರಸ್ತೆಯ ಬಲಬದಿಯಲ್ಲಿ ಆಟೋರಿಕ್ಷಾವನ್ನು ನಿಲ್ಲಿಸುವ ವೇಳೆ ಅಲ್ಲಿಯೇ ನಿಂತುಕೊಂಡಿದ್ದ ಪಕ್ಕದ ಅಂಗಡಿ ಮಾಲೀಕ ರಾಜು ಯಾನೆ ಕೆ.ಎಮ್.ಮ್ಯಾಥ್ಯೂ ಎಂಬವರು ಜಗನ್ನಾಥರವರೊಂದಿಗೆ ರಸ್ತೆ ವಿಚಾರದಲ್ಲಿ ತಕರಾರು ತೆಗೆದು ಅವ್ಯಾಚವಾಗಿ ಬೈದಿದ್ದಾರೆ. ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ರಾಜು ಯಾನೆ ಕೆ.ಎಮ್.ಮ್ಯಾಥ್ಯೂರವರು ರಸ್ತೆಯ ಪಕ್ಕದಲ್ಲಿರುವ ಕಲ್ಲನ್ನು ಹಿಡಿದು ಜಗನ್ನಾಥ ಶೆಟ್ಟಿಯವರಿಗೆ ಹೊಡೆದ ಪರಿಣಾಮ ಪ್ರಜ್ಞೆ ತಪ್ಪಿದ್ದಾರೆ. ಆಗ ಅಲ್ಲಿಯೇ ಇದ್ದ ಜಗನ್ನಾಥ ಶೆಟ್ಟಿಯವರ ಪತ್ನಿ ಉಪಚರಿಸಿ ಪರಿಚಯಸ್ಥರ ಆಟೋರಿಕ್ಷಾದಲ್ಲಿ ಕಡಬ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು ಒಳರೋಗಿಯಾಗಿ ದಾಖಲಿಸಿದ್ದಾರೆ. ಈ ಬಗ್ಗೆ ಜಗನ್ನಾಥ ಶೆಟ್ಟಿ ಅವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here