ಮೌನವಹಿಸಿದ ಅರಣ್ಯ ಇಲಾಖೆ- ಆಕ್ರೋಶ
ಕಡಬ: ಬಲ್ಯ ಗ್ರಾಮದ ಕೆಲವೆಡೆ ಕಾಡಾನೆ ಲಗ್ಗೆ ಇಟ್ಟಿದ್ದು ಕೃಷಿಯನ್ನು ಹಾನಿಗೊಳಿಸಿದ ಘಟನೆ ಜು.25 ರಂದು ನಡೆದಿದೆ.
ಬಲ್ಯದ ಕೊಡಂಗೆ ನಿವಾಸಿ ಧನಂಜಯ ಇವರ ಬತ್ತ ಬೇಸಾಯದ ಗದ್ದೆಗೆ ಎರಡು ಕಾಡಾನೆಗಳು ಬಂದು ಅಪಾರ ಪ್ರಮಾಣದ ಕೃಷಿ ಹಾನಿ ಮಾಡಿದೆ. ಅಡಿಕೆ ಕೃಷಿ, ಬಾಳೆ ಕೃಷಿ, ನೀರಾವರಿ ಪೈಪ್ ಲೈನ್ ಗಳನ್ನು ಹಾನಿಗೊಳಿಸಿದ್ದು ಅಪಾರ ನಷ್ಟ ಉಂಟಾಗಿದೆ. ಇವರ ಕೃಷಿ ಅಲ್ಲದೆ ಜಲಜಾಕ್ಷಿ ರೈ ಗೋಣಿಗುಡ್ಡೆ, ಶಾಂತರಾಮ ರೈ ಬೆದ್ರಾಡಿ, ಸುಂದರ ಗೌಡ ಗೋಣಿಗುಡ್ಡೆ, ಪುಷ್ಪರಾಜ್ ಕೊಡಂಗೆ, ಶಿವಪ್ರಸಾದ್ ಪುತ್ತಿಲ,ಇವರ ಕೃಷಿಗೂ ಹಾನಿ ಮಾಡಿದ್ದು ತುಂಬಾ ನಷ್ಟ ಉಂಟು ಮಾಡಿದೆ.
ಈ ಆನೆ ಗಳು ಕಳೆದ ನಾಲ್ಕೈದು ದಿವಸಗಳಿಂದ ಪಡ್ನೂರು ರಕ್ಷಿತಾರಣ್ಯದಲ್ಲಿ ಇದ್ದು ರಾತ್ರಿ ಹೊತ್ತು ಬಲ್ಯ ಗ್ರಾಮದಲ್ಲಿ ಬಂದು ಕೃಷಿ ಹಾನಿ ಮಾಡುತ್ತಿವೆ. ಹೀಗಿದ್ದರೂ ಅರಣ್ಯ ಇಲಾಖೆ ಮೌನ ತಾಳಿದ್ದು ಯಾವುದೇ ಕಾರ್ಯಚಾರಣೆ ನಡೆಸುತ್ತಿಲ್ಲ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.