ಬಡಗನ್ನೂರು : ಕೖೊಲ ಬಡಗನ್ನೂರು ಶಾಲಾ ಮುಂಭಾಗದಲ್ಲಿ ತಾಲೂಕು ಪಂಚಾಯತ್ ಅನುದಾನದಲ್ಲಿ ನಿರ್ಮಾಣಗೊಂಡ ಸಭಾಂಗಣದ ಮೇಲೆ ಜು. 25 ರಂದು ಸಂಜೆ ಬೀಸಿದ ಗಾಳಿ ಮಳೆಗೆ ಭಾರಿ ಗಾತ್ರದ ನೆಲ್ಲಿಕಾಯಿ ಮರವೊಂದು ಬೇರು ಸಮೇತ ಕಿತ್ತು ಬಿದ್ದು ಸಭಾಂಗಣದ ಗೋಡೆ ಹಾಗೂ ಮೇಲ್ಚಾವಣಿಗೆಯ ಸಿಮೆಂಟ್ ಶಿಟ್ ಸಂಪೂರ್ಣ ಹಾನಿಗೊಂಡು ನಷ್ಟ ಸಂಭವಿಸಿದೆ.

ಅದೃಷ್ಟವಶಾತ್ ಜು. 25 ರಂದು ಶಾಲೆಗೆ ಮಳೆ ಸಲುವಾಗಿ ರಜೆ ಘೋಷಣೆಯಾಗಿತ್ತು. ಇದರಿಂದ ಯಾವುದೇ ಪ್ರಾಣಹಾನಿ ಸಂಭವಿಸದೆ ಮಕ್ಕಳು ಸುರಕ್ಷಿತವಾಗಿರಲು ಕಾರಣವಾಗಿದೆ.