





ಕಡಬ : ಕಡಬ ಗ್ರಾಮ ಪಿಜಕ್ಕಳ ಶ್ರೀ ಮಹಾವಿಷ್ಣು ದೇವಸ್ಥಾನದ ನಾಗನ ಕಟ್ಟೆಯಲ್ಲಿ ಜು.29ರಂದು ನಾಗರಪಂಚಮಿಯು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.


ಕ್ಷೀರಾಭಿಷೇಕ,ಎಳನೀರು ಅಭಿಷೇಕ, ಹಣ್ಣುಕಾಯಿ,ಪಂಚಮಾಮೃತ ಅಭಿಷೇಕ, ನಾಗತಂಬಿಲ ಸೇವೆಗಳು ನಡೆಯಿತು.ವೈದಿಕ ವಿಧಿವಿಧಾನಗಳನ್ನು ದೇವಸ್ಥಾನ ಪ್ರದಾನ ಅರ್ಚಕರಾದ ಮೋಹನ್ ರಾವ್ ನೇತೃತ್ವದಲ್ಲಿ ನೆರವೇರಿಸಿದರು.






ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೃಷ್ಣಪ್ಪ ಗೌಡ ಪೂಜಾರಿ ಮನೆ , ದೇವಾಲಯದ ಮಾಜಿ ಆಡಳಿತ ಮೊಕ್ತೇಸರುರಾದ ಕೊರಗಪ್ಪ ಗೌಡ ಪಿಜಕ್ಕಳ,ಭಜನಾಮಂಡಳಿ ಅದ್ಯಕ್ಷ ರಾದ ಪ್ರಭಾಕರ ಕೆ.ಎಸ್, ಮಹಿಳಾ ವೇದಿಕೆ ಅದ್ಯಕ್ಷರಾದ ರುಕ್ಮಿಣಿ ಕೆ.ಬಿ. ಪ್ರಮುಖರಾದ ಪುರಂದರ ರೈ ಪಿಜಕ್ಕಳ, ದಯಾನಂದ ಗೌಡ ಪೊಯ್ಯತಡ್ಡ,ಜನಾರ್ದನ ನಾಯ್ಕ ಪರಪ್ಪು,ಆನಂದ ಗೌಡ ಕೋಂಕ್ಯಾಡಿ, ರಮೇಶ್ ಪಾಳೋಳಿ,ಸತೀಶ,ಮಾಜಿ ಸೈನಿಕ ಸುಂದರ ಗೌಡ ಪಿಜಕ್ಕಳ,ಕೇನ್ಯ ಕೃಷ್ಣಪ್ಪ ಗೌಡ ,ಸುರೇಶ್,ರಾಮಣ್ಣ ಗೌಡ, ನಿವೃತ್ತ ಶಿಕ್ಷಕರಾದ ಪೂವಪ್ಪ ಗೌಡ ,ಸುಂದರ ಗೌಡ ಪಾಲೋಳಿ,ಮೋಹನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.










