ನೆಲ್ಯಾಡಿ: ಉದನೆಯಲ್ಲಿ ನೂತನವಾಗಿ ಆರಂಭಗೊಂಡ ಭಾರತ್ ಆಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಜು.30ರಂದು ಬೆಳಿಗ್ಗೆ ನಡೆಯಿತು.
ಜಿ.ಪಂ.ಮಾಜಿ ಸದಸ್ಯ ಪಿ.ಪಿ.ವರ್ಗೀಸ್‌ರವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ದಿವಾಕರ್ ಗೌಡ ಶಿರಾಡಿ ಅವರು ಆಂಬುಲೆನ್ಸ್ ಮಾಲಕ ಅಬ್ದುಲ್ ಸಲಾಂ(ಸಮದ್) ಅವರನ್ನು ಸನ್ಮಾನಿಸಿದರು. ಉದನೆ ಸೈಂಟ್ ತೋಮಸ್ ಫೊರೇನ್ ಚರ್ಚ್‌ನ ರೆ.ಫಾ.ಸಿಬಿ ತೋಮಸ್ ಪಣಿಚಿಕ್ಕಲ್, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಪ್ರಮುಖರಾದ ಕೈಕುರೆ ಮಂಜುನಾಥ ಗೌಡ, ಡೊಂಬಯ್ಯ ಗೌಡ ಕುದ್ಕೋಳಿ, ಕಿರಣ ಕೆರೆಜಾಲು, ಸದಾಶಿವ ನೆಲ್ಯಾಡಿ, ಬಾಲಕೃಷ್ಣ ಗೌಡ ಕಳಪಾರು, ವಸಂತ ಗೌಡ ಗುಡ್ರಾಡಿ, ನಾರಾಯಣ ಗೌಡ ಊರ್ನಡ್ಕ, ನಾಗೇಶ್ ಕೋಲಾರು, ದಾಮೋದರ ಗೌಡ, ಟಿ.ಜೆ.ಮ್ಯಾಥ್ಯು, ಬ್ಯಾಂಕ್ ಆಫ್ ಬರೋಡ ಉದನೆ ಶಾಖೆ ಮೇನೇಜರ್, ಸಿಬ್ಬಂದಿಗಳು, ಶಿರಾಡಿ ಗ್ರಾ.ಪಂ.ಸಿಬ್ಬಂದಿಗಳು, ಉದನೆ ಹಾಲು ಉತ್ಪಾದಕರ ಸಹಕಾರ ಸಂಘದ ಸಿಬ್ಬಂದಿಗಳು, ಉದನೆಯ ಆಟೋ ಚಾಲಕರು, ಉದನೆ, ಅಡ್ಡಹೊಳೆ, ಶಿರಾಡಿ, ಕೊಣಾಜೆ ವ್ಯಾಪ್ತಿಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉದನೆ ಸಂತ ಅಂತೋನಿ ಪ್ರೌಢಶಾಲೆ ಮುಖ್ಯಗುರು ಶ್ರೀಧರ್ ಗೌಡ ಸ್ವಾಗತಿಸಿದರು. ಉದ್ಯಮಿ ಅಬೂಬಕ್ಕರ್ ಸಿದ್ದೀಕ್ ವಂದಿಸಿದರು.