ಪುತ್ತೂರು: ಸಮಸ್ತ ಎಸ್ ವೈ ಎಸ್ ಹಾಗೂ ಪೋಷಕ ಸಂಘಟನೆಗಳ ವತಿಯಿಂದ ಪ್ರತೀ ವರ್ಷ ನಡೆಸಲಾಗುತ್ತಿದ್ದ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಕಾರ್ಯಕ್ರಮವೂ ಅ.15ರಂದು ಮುಕ್ವೆ ರಹ್ಮಾನಿಯ ಜುಮಾಮಸೀದಿ ಮದ್ರಸ ಆವರಣದಲ್ಲಿ ಸಂಜೆ 4.00 ಗಂಟೆಗೆ ನಡೆಯಲಿದ್ದು, ನಾಯಕರ ಸಮಾಲೋಚನಾ ಸಭೆಯು ಇಂದು ನಡೆಯಿತು.


ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಅಬ್ದುಲ್ ಅಝಿಝ್ ದಾರಿಮಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ ಎಲ್ ಉಮ್ಮರ್ ದಾರಿಮಿ ,ಪುತ್ತೂರು ತಾಲೂಕು ಅಧ್ಯಕ್ಷ ಅಬುಬಕ್ಕರ್ ಮುಲಾರ್, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ರಫೀಕ್ ಹಾಜಿ ಕೊಡಾಜೆ, ಅಬೂಬಕ್ಕರ್ ಹಾಜಿ ಸ್ವಾಗತ್, ಮುಸ್ತಪ ಪೈಝಿ ಕಿನ್ಯ, ಹಕೀಮ್ ಪರ್ತಿಪ್ಪಾಡಿ, ಕೆ ಎಂ ಕೊಡಂಗಾಯಿ, ಸೈಯದ್ ಅಲಿ ದೇರ್ಲಕಟ್ಟೆ ಸೇರಿದಂತೆ ಹಲವಾರು ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದ ಯಶಸ್ವಿಗೆ ಸಮಿತಿಯೊಂದನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಅಬೂಬಕ್ಕರ್ ಮಲಾರ್ ಅವರನ್ನು ಆಯ್ಕೆ ಮಾಡಲಾಯಿತು ಉಳಿದಂತೆ ಕಾರ್ಯದರ್ಶಿಯಾಗಿ ರಫೀಕ್ ಹಾಜಿ.ಕೂಡಾಜೆ, ಕೋಶಾಧಿಕಾರಿಯಾಗಿ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ ಅವರನ್ನು ನೇಮಿಸಲಾಯಿತು. ಕಾರ್ಯಕ್ರಮಕ್ಕೆ ಸಮಸ್ತದ ಎಲ್ಲಾ ಪೋಷಕ ಸಂಘಟನೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿನಂತಿಸಲಾಯಿತು.