ಬಡಗನ್ನೂರು: ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಇದರ ಗ್ರಾಮೀಣ ಶಾಖೆ ಮರಾಟಿ ಸಮಾಜ ಸೇವಾ ಸಂಘ ಪಡುಮಲೆ ವಾರ್ಷಿಕ ಮಹಾಸಭೆ, ಆಟಿ ಐಸಿರಿ,ಮತ್ತು ವನಮಹೋತ್ಸವ,ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ ಅ.3 ರಂದು ಪೂರ್ವಾಹ್ನ ಗಂ.9ಕ್ಕೆ ದೇವಪ್ಪ ನಾಯ್ಕ ಚಂದುಕೂಡ್ಲು ಇವರ ಮನೆಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಪುತ್ತೂರು ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘ ಅಧ್ಯಕ್ಷ ಕರುಣಾಕರ ನಾಯ್ಕ ಅಲೆಟ್ಟಿ ಪಾಂಗಳಾಯಿ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅಪ್ಪಯ್ಯ ನಾಯ್ಕ ತಲೆಂಜಿ ವಹಿಸಲಿದ್ದಾರೆ.
ಅತಿಥಿಗಳಾಗಿ, ಮತ್ತೂರು ಕೊಂಬೆಟ್ಟು ಮಹಿಳಾ ವೇದಿಕೆಯ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ, ಮಂಗಳೂರು ರೈಲ್ವೆ ಇಲಾಖೆ ನಿವೃತ್ತ ಆದಿಕಾರಿ,ಕೃಷ್ಣ ನಾಯ್ಕ ಮುಡಿಪಿನಡ್ಕ, ಮತ್ತೂರು ಕೊಂಬೆಟ್ಟು ಮರಾಟಿ ಯುವ ವೇದಿಕೆ ಆಧ್ಯಕ್ಷ ವಸಂತ ನಾಯ್ಕ ಆರ್ಯಾಪು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಠಾರ ಸಮಿತಿ ಸದಸ್ಯರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸಮಾಜದ ಬಾಂಧವರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮನ್ನು ಯಶಸ್ವಿಗೊಳಿಸುವಂತೆ ಅಧ್ಯಕ್ಷ ಅಪ್ಪಯ್ಯ ನಾಯ್ಕ ತಲೆಂಜಿ, ಕಾರ್ಯದರ್ಶಿ ನಾರಾಯಣ ನಾಯ್ಕ ಪೇರಾಲು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ವಿತರಣೆ
10ನೇ ತರಗತಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 85% ಮೇಲ್ಪಟ್ಟು ಡಿಸ್ಟಿಂಕ್ಷನ್ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ. ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ನಡೆಯಲಿದೆ.
ವಿವಿಧ ಸ್ಪರ್ಧೆ
ಪೂರ್ವಾಹ್ನ ಗಂಟೆ 9-00ರಿಂದ 11-00ರ ವರೆಗೆ ಸಮಾಜದ ಮಹಿಳೆಯರಿಗೆ, ಪುರುಷರಿಗೆ ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧೆ ಕೂಟ ನಡೆಯಲಿದೆ.