ವಿಟ್ಲ: ವಿಟ್ಲ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯು ಬ್ಲಾಕ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ರವರ ಅಧ್ಯಕ್ಷತೆಯಲ್ಲಿ ಆ.2ರಂದು ವಿಟ್ಲ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ಕಾಂಗ್ರೆಸ್ ಮುಖಂಡರು, ಮಾಜಿ ವಿಟ್ಲ ಗ್ರಾ.ಪಂ. ಸದಸ್ಯರಾಗಿದ್ದ ಅನಿತಾಕ್ಷಿ ಪಲೆರಿರವರಿಗೆ ನುಡಿನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಹಿಂದುಳಿದ ಘಟಕದ ಅಧ್ಯಕ್ಷರಾದ ಮೋಹನ್ ಗುರ್ಜಿನಡ್ಕ, ಬ್ಲಾಕ್ ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಾಸಿರ್ ಕೋಲ್ಪೆ, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿ ಕೊಲ್ಯ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ವಿ ಅಬ್ದುಲ್ ರಹಿಮಾನ್(ಹಸೈನಾರ್ ನೆಲ್ಲಿಗುಡ್ಡೆ),ಬ್ಲಾಕ್ ಪ್ರಧಾನ ಕಾರ್ಯದರ್ಶಿ ವಿಕೆಎಂ ಹಂಝ, ವಿಟ್ಲ ಗ್ರಾ ಪಂ ಮಾಜಿ ಅಧ್ಯಕ್ಷ ಎಂ ಕೆ ಮುಸಾ, ಮಾಣಿಲ ಗ್ರಾ ಪಂ ಅಧ್ಯಕ್ಷ ಶ್ರೀಧರ ಬಾಳೆಕಲ್ಲು,ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಅಬ್ಬು ನವಗ್ರಾಮ, ಬ್ಲಾಕ್ ಉಪಾಧ್ಯಕ್ಷರುಗಳಾದ ದಿನಕರ ಆಳ್ವ.ಶ್ರೀಧರ ಶೆಟ್ಟಿ ಪುಣಚ, ಮುಖಂಡರಾದ ವಿ. ಎ. ರಶೀದ್, ಹಿರಿಯ ಮುಖಂಡರಾದ ಶಿವರಾಮ ನಾಯ್ಕ, ವಲಯ ಅಧ್ಯಕ್ಷರುಗಳಾದ ಕೋಟಿ ಪೂಜಾರಿ, ಜೋನ್ಸನ್ ,ಝೆವಿಯರ್ ಡಿಸೋಜಾ, ಸಂತೋಷ್, ವಿಷ್ಣು ಭಟ್, ಸೀತಾರಾಮ ಶೆಟ್ಟಿ ಅಳಿಕೆ, ಪ್ರಮುಖರಾದ ಎಸ್. ಕೆ. ಮುಹಮ್ಮದ್, ಅಶೋಕ್ ಎನ್. ಎಸ್. ಡಿ., ಉಮೇಶ ಎಸ್, ರವಿ ಉಕ್ಕುಡ, ಚಂದ್ರಹಾಸ ದೇವಸ್ಯ, ಸದಾಶಿವ ಶೆಟ್ಟಿ, ಹಾರಿಸ್ ಸಿ. ಎಚ್,ಹಮೀದ್ ,ಸೀತಾರಾಮ ಪಲೆರಿ ಮೊದಲಾದವರು ಉಪಸ್ಥಿತರಿದ್ದರು.