ಪುತ್ತೂರು: ಸೋಮವಾರಪೇಟೆ ದಿ.ಜೋಸೆಫ್ ಮಸ್ಕರೇನ್ಹಸ್ ರವರ ಪತ್ನಿ ಎಲಿಜಾ ಮಸ್ಕರೇನ್ಹಸ್ (81ವ.) ರವರು ಅಸೌಖ್ಯದಿಂದ ಪುತ್ತೂರಿನ ಹೆಬ್ಬಾರ್ ಬೈಲ್ ನಲ್ಲಿರುವ ಪುತ್ರ ಡಾ.ನೋರ್ಬರ್ಟ್ ಮಸ್ಕರೇನ್ಹಸ್ ರವರ ಸ್ವಗೃಹದಲ್ಲಿ ಆ.3 ರಂದು ಮುಂಜಾನೆ ನಿಧನ ಹೊಂದಿದರು.
ಮೃತರು ಪುತ್ರರಾದ ವಲೇರಿಯನ್ ಮಸ್ಕರೇನ್ಹಸ್ ಸೋಮವಾರಪೇಟೆ, ಫ್ರಾನ್ಸಿಸ್ ಮಸ್ಕರೇನ್ಹಸ್ ಮಂಗಳೂರು, ವಿನ್ಸೆಂಟ್ ಮಸ್ಕರೇನ್ಹಸ್ ಬೆಂಗಳೂರು, ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ|ನೋರ್ಬರ್ಟ್ ಮಸ್ಕರೇನ್ಹಸ್ ಹೆಬ್ಬಾರ್ ಬೈಲ್, ಪುತ್ರಿ ಆಲಿಸ್ ಮಸ್ಕರೇನ್ಹಸ್ ಬೆಂಗಳೂರು, ಸಹೋದರಿ ಸಬೀನಾ ರೊಡ್ರಿಗಸ್ ಕಡಬ, ಸಹೋದರರಾದ ಪಾವ್ಲ್ ಮಸ್ಕರೇನ್ಹಸ್ ಸಾಮೆತ್ತಡ್ಕ, ಲ್ಯಾನ್ಸಿ ಮಸ್ಕರೇನ್ಹಸ್ ಸಾಮೆತ್ತಡ್ಕ, ಜೋಸೆಫ್ ಮಸ್ಕರೇನ್ಹಸ್ ಎಪಿಎಂಸಿ ರಸ್ತೆರವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಮೃತರ ಸ್ವಗೃಹವಾದ ಸೋಮವಾರಪೇಟೆಯಲ್ಲಿ ಪುತ್ರ ವಲೇರಿಯನ್ ಮಸ್ಕರೇನ್ಹಸ್ ರವರ ಮನೆಯಲ್ಲಿ ಆ.3 ರಂದು ಸಂಜೆ(4 ಗಂಟೆಗೆ) ಜರಗಲಿದೆ ಎಂದು ಮೃತರ ಕುಟುಂಬ ಮೂಲಗಳು ತಿಳಿಸಿದೆ.