ಬಡಗನ್ನೂರು: ಸುಳ್ಯ ಪದವು ಸರ್ವೋದಯ ವಿದ್ಯಾಸಂಸ್ಥೆಗಳ ಶಿಕ್ಷಕ-ರಕ್ಷಕ -ಮಕ್ಕಳ ಸುರಕ್ಷಾ ಸಮಿತಿ ಹಾಗೂ ತಾಯಂದಿರ ಸಮಿತಿ ಇವರ ಸಹಯೋಗದಲ್ಲಿ ಊರಿನ ವಿವಿಧ ಸಂಘ ಸಂಸ್ಥೆಗಳ ಹಾಗೂ ವಿದ್ಯಾ ಅಭಿಮಾನಿಗಳ ಸಹಕಾರದೊಂದಿಗೆ “ಗದ್ದೆಯಲ್ಲಿ ಒಂದು ದಿನ ಭತ್ತದ ಕೃಷಿ “ವಿಶಿಷ್ಠ ಕಾರ್ಯಕ್ರಮ ಜು.30 ರಂದು ಕುಳದ ಪಾದೆ ತರವಾಡು ಮನೆಯ ಗದ್ದೆಯಲ್ಲಿ ನಡೆಯಿತು. ತರವಾಡು ಮನೆಯ ಯಜಮಾನ ದಾಮೋದರ ಎನ್ .ಎ ಕುಳದಪಾದೆ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಶುಭ ಹಾರೖೆಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಪ್ರಶಸ್ತಿ ವಿಜೇತ ಕೃಷಿಕ ಮೋನಪ್ಪ ಪೂಜಾರಿ ಕೆರೆಮಾರು ತೆಂಗಿನ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ, ಮಾತನಾಡಿ, ವೈಜ್ಞಾನಿಕವಾಗಿ ಕೃಷಿಯಲ್ಲಿ ತೊಡಗಿಸಿಕೊಂಡರೆ ಪ್ರತಿಯೊಬ್ಬರೂ ಆರ್ಥಿಕವಾಗಿ ಮುಂದುವರೆಯಲು ಸಾಧ್ಯ .ಸಮಾಜದಲ್ಲಿ ಉನ್ನತವಾದ ಸ್ಥಾನಮಾನ ಪಡೆಯಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಳ್ಳೂರು ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ್ ರೈ, ಭಾಗಿರಥಿ, ಬೇಬಿ ಮತ್ತು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ರಶೀದ, ಕಾಸರಗೋಡು ಕನ್ನಡ ಸಾಂಸ್ಕೃತಿಕ ಅಕಾಡೆಮಿಯ ಚನಿಯಪ್ಪ ನಾಯ್ಕ ನಿಡಿಯಡ್ಕ, ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಾದ ಆನಂದ ಪಾದಗದ್ದೆ , ಅಬ್ದುಲ್ ಖಾದರ್ ಸುಳ್ಯಪ್ಪದವು, ತಾಯಂದಿರ ಸಮಿತಿಯ ಅಧ್ಯಕ್ಷೆ ಸತ್ಯವತಿ, ಮಕ್ಕಳ ಸುರಕ್ಷಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಚಂದ್ರ ಮರದಮೂಲೆ, ಆಯುಧ ಪೂಜಾ ಸೇವಾ ಸಮಿತಿಯ ಅಧ್ಯಕ್ಷ ಗಿರೀಶ್ ಕುಮಾರ್ ಕನ್ನಡ್ಕ ಬಡಗನೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಗಂಗಾಧರ ರೈ ಏನ್ ಜಿ, ಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರನ್, ಸಂಸ್ಥೆಯ ನಿರ್ದೇಶಕರಾದ ಸುಬ್ರಮಣ್ಯ ಭಟ್ಟ ಪಾದೆ ಗದ್ದೆ, ಸುಳ್ಯಪದವು ಬಾಲ ಸುಬ್ರಮಣ್ಯ ಆನುಧಾನಿತ ಹಿ. ಪ್ರಾ ಶಾಲಾ ನಿವೃತ್ತ ಶಿಕ್ಷಕ ರಾಮಣ್ಣ ಗೌಡ ಬಸವಹಿತ್ತಿಲು, ಪ್ರದೀಪ ಭಟ್ಟ ಪ್ರಕಾಶ್ ವಾಲ್ತಾಜೆ , ಅಧ್ಯಕ್ಷರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡಗನೂರು ಒಕ್ಕೂಟದ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ ಶ್ರೀಧರ ಪೂಜಾರಿ ಕೆಳಂದೂರು ಬಾಬು ಪೂಜಾರಿ ನಾಕೂರು ಪದ್ಮಿನಿ ನಿಸರ್ಗ ಗಾರ್ಡನ್, ರೇಷ್ಮಾ ದಾಮೋದರ್ ಕುಳ ಹಾಗೂ ಶ್ರೀ ವಿಷ್ಣು ಸ್ಪೋರ್ಟ್ಸ್ ಮತ್ತು ಕಲಾಸಂಘ ಕುಲದಪ್ಪಾರೆ ಶ್ರೀ ನವಚೇತನ ಯುವಕ ಮಂಡಲ ಪಾಧೆ ಗದ್ದೆ ,ಹಲೋ ಫ್ರೆಂಡ್ಸ್ ಸಬ್ರುಕಜೆ ಇದರ ಅಧ್ಯಕ್ಷರುಗಳು ಹಾಗೂ ಸರ್ವ ಸದಸ್ಯರುಗಳು, ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ,ವಿದ್ಯಾ ಅಭಿಮಾನಿಗಳು ,ಪೋಷಕರು ಭಾಗವಹಿಸಿದರು.
ಸಂಸ್ಥೆಯ ಮುಖ್ಯ ಶಿಕ್ಷಕ ಸುಖೇಶ್ ರೖೆ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿ ವಂದಿಸಿದರು. ಶಿಕ್ಷಕಿ ಪ್ರಶಾಂತಿ ಎಸ್ ರೖೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.

ಆಟೋಟ ಸ್ಪರ್ಧೆಗಳ ತೀರ್ಪುಗಾರರಾಗಿ ಗುರುಕಿರಣ್ ರೈ ಎಂ ಜಿ,ಕೇಶವ ,ಮಹೇಶ್ ಪಾದೆಗದ್ದೆ ಮತ್ತು ಶ್ರೀಧರ್ ಕಾಯರ್ ಪದವು ಸಹಕರಿಸಿದರು ಸಂಸ್ಥೆಯ ಶಿಕ್ಷಕರುಗಳು ಮಕ್ಕಳು ಮತ್ತು ಶಿಕ್ಷಣಾಭಿಮಾನಿಗಳು ಹಾಗೂ ಊರಿನವರು ಭಾಗವಹಿಸಿದರು.
ಮನೋರಂಜನೆ ಆಟೋಟ ಸ್ಪರ್ಧೆ
ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮದಲ್ಲಿ ವಿವಿಧ ಮನೋರಂಜನೆಯ ಆಟೋಟಗಳನ್ನು ಅಯೋಜಿಸಿದ್ದು ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಸನ್ಮಾನ
ಕಾರ್ಯಕ್ರಮ ಆಯೋಜನೆಗೆ ಸ್ಥಳಾವಕಾಶ ಒದಗಿಸಿದ ಕುಳದಪಾದೆ ತರವಾಡು ಮನೆಯಜಮಾನ ಧಾಮೋಧರ ಎನ್ .ಎ ಕುಳದಪಾದೆ ದಂಪತಿಗಳನ್ನು ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ಕೃಷಿಕ ಮೋನಪ್ಪ ಪೂಜಾರಿ ಕೆರೆಮಾರು ಇವರನ್ನು ಸಾಲು ಹೊದಿಸಿ ಫಲಪುಷ್ಷ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.