ಶಾಂತಿನಗರ: ಆದರ್ಶ ಯುವಕ ಮಂಡಲದ ನೇತೃತ್ವದಲ್ಲಿ ಶ್ರಮದಾನ

0

ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಶಾಂತಿನಗರ ಪರಿಸರದಲ್ಲಿ ರಸ್ತೆಗೆ ಬಾಗಿಕೊಂಡಿದ್ದ ಮರದ ಕೊಂಬೆ, ರಸ್ತೆಗೆ ಅಡ್ಡವಾಗಿ ಬೆಳೆದಿದ್ದು ಹುಲ್ಲು,ಗಿಡಗಳನ್ನು ಶಾಂತಿನಗರ ಆದರ್ಶ ಯುವಕ ಮಂಡಲದ ಇದರ ನೇತೃತ್ವದಲ್ಲಿ ಸಂಘದ ಸದಸ್ಯರು ತೆರೆವುಗೊಳಿಸಿದರು.


ರಸ್ತೆಯ ಸುಮಾರು ೫ ಕಿ.ಮೀ.ವ್ಯಾಪ್ತಿ ಎರಡೂ ಬದಿ ಬೆಳೆದಿದ್ದ ಹುಲ್ಲು,ಗಿಡ, ಮರದ ಕೊಂಬೆಗಳನ್ನು ಆದರ್ಶ ಯುವಕ ಮಂಡಲದ ಸದಸ್ಯರು ಮತ್ತು ಊರವರ ಸಹಕಾರದಲ್ಲಿ ಶ್ರಮದಾನದ ಮೂಲಕ ತೆಗೆಯಲಾಯಿತು. ಶ್ರಮದಾನದಲ್ಲಿ ಆದರ್ಶ ಯುವಕ ಮಂಡಲದ ಅಧ್ಯಕ್ಷರಾದ ತೇಜಸ್ ಬರೆಮೇಲು, ಉಪಾಧ್ಯಕ್ಷ ಜಗದೀಶ್ ಅರ್ತಿಗುಳಿ, ಕಾರ್ಯದರ್ಶಿ ಪ್ರಜ್ವಲ್ ಬಿ.ಜೆ, ಶಿವಪ್ರಸಾದ್ ಶಾಂತಿನಗರ, ಶಾಂತಿನಗರ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಮುರಿಯೇಲು ಮತ್ತು ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here