ಬಡಗನ್ನೂರು ಶಾಲೆಯಲ್ಲಿ ಸ್ವಚ್ಛತಾ ಆಂದೋಲನ ಮತ್ತು ಸಂಸ್ಕಾರ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ಕಾರ್ಯಾಗಾರ

0

ಬಡಗನ್ನೂರು: ಶ್ರೀ ಕ್ಷೇತ್ರ ಒಡಿಯೂರು ಗ್ರಾಮ ವಿಕಾಸ ಯೋಜನೆ ಬಡಗನ್ನೂರು ಘಟ ಸಮಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡಗನ್ನೂರು ಹಾಗೂ ಶಾಲಾ ಎಸ್ ಡಿಎಂಸಿ ಸಮಿತಿ ಬಡಗನ್ನೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಜನ್ಮದಿನಾಚರಣೆ ಅಂಗವಾಗಿ ಸ್ವಚ್ಛತಾ ಆಂದೋಲನ ಮತ್ತು ಸಂಸ್ಕಾರ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ಕಾರ್ಯಾಗಾರ ಬಡಗನ್ನೂರು ಸ.ಉ.ಹಿ.ಪ್ರಾ ಶಾಲೆಯಲ್ಲಿ ಅ.3ರಂದು ನಡೆಯಿತು.

ಕಾರ್ಯಕ್ರಮವನ್ನು ಹಿರಿಯರು, ಪ್ರಗತಿಪರ ಕೃಷಿಕರು ಆದ ನಾರಾಯಣ ರೈ ಕುದ್ಕಾಡಿ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶುಭ ಹಾರೖೆಸಿದರು.. ಪಟ್ಟೆ ಶ್ರೀ ಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕಿ ಶಂಕರಿ ನಾರಾಯಣ ಪಾಟಾಳಿ ರವರು ಸ್ವಚ್ಚತೆ ಸಂಸ್ಕಾರ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿಯನ್ನು ನೀಡಿದರು.

ಬಡಗನ್ನೂರು ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಎ, ಎಸ್ ಡಿ ಎಂ.ಸಿ ಅಧ್ಯಕ್ಷ ಗಿರೀಶ್ ಗೌಡ, ಕನ್ನಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಡಗನ್ನೂರು ಒಕ್ಕೂಟದ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ, ಸೇವಾಪ್ರತಿನಿಧಿ ಸಾವಿತ್ರಿ, ಶ್ರೀ ಕ್ಷೇತ್ರ ಒಡಿಯೂರು ಪಡುಮಲೆ ಘಟಸಮಿತಿ ಅಧ್ಯಕ್ಷೆ ಸೇಸಮ್ಮ ಪದಡ್ಕ, ಬಡಗನ್ನೂರು ಗ್ರಾಮದ ಸೇವಾದೀಕ್ಷಿತೆ ಮೋಹಿನಿ ರೈ ದೊಡ್ಡಡ್ಕ, ಪಡುಮಲೆ ವರಮಹಾಲಕ್ಷ್ಮೀ ಪೂಜಾಸಮಿತಿ ಅಧ್ಯಕ್ಷೆ ವಾಣಿಶ್ರೀ ಪಡುಮಲೆ, ಘಟಸಮಿತಿ ಪದಾಧಿಕಾರಿಗಳಾದ ಭಾರತಿ ರೈ, ಸುಲೋಚನ, ಪುಷ್ಪಲತಾ, ವಿಜಯಲಕ್ಷ್ಮಿ ಹಾಗೂ ಸರ್ವ ಸದಸ್ಯರು, ಶಾಲಾ ಪೋಷಕ ವೃಂದದವರು ಹಾಗೂ ಶಾಲಾ ಎಸ್ ಡಿ ಎಂ.ಸಿ ಸದಸ್ಯರು ಸ್ವಚ್ಚತಾ ಕಾರ್ಯಕ್ರಮ ಭಾಗವಹಿಸಿದರು.

LEAVE A REPLY

Please enter your comment!
Please enter your name here