ಈಶ್ವರಮಂಗಲ: ಹನುಮಗಿರಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆ.7ರಂದು ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಚೆಸ್ ಪಂದ್ಯಾಟದ ಸಮರೋಪ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಸಂಚಾಲಕ ಶಿವರಾಮ್ ಪಿ ಇವರು ಮಾತನಾಡುತ್ತಾ ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆಗಳು ಕೂಡ ಬಹಳ ಮುಖ್ಯ, ಈ ಪಂದ್ಯಾಟದಲ್ಲಿ ಭಾಗವಹಿಸಿ ವಿಜಯವನ್ನು ಸಾಧಿಸಿದ ವಿದ್ಯಾರ್ಥಿಗಳಿಗೆಲ್ಲರಿಗೂ ಅಭಿನಂದನೆಗಳು, ಹೆತ್ತವರಿಗೆ, ಶಾಲೆಗೆ ಇಡೀ ನಾಡಿಗೂ ಕೀರ್ತಿ ತನ್ನಿ ಎಂದು ಶುಭಹಾರೈಸಿದರು.
ಈ ಪಂದ್ಯಾಟದಲ್ಲಿ 9 ವಿವಿಧ ಶಾಲೆಗಳ 51 ಮಕ್ಕಳು ಭಾಗವಹಿಸಿದ್ದರು. 17ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಅನಘ ಎಂ (ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಲ) , ದ್ವಿತೀಯ ಸ್ಥಾನ ಸುಪ್ರೀತ (ಸರಕಾರಿ ಪದವಿ ಪೂರ್ವ ಕಾಲೇಜು, ಬೆಟ್ಟಂಪಾಡಿ) ತೃತೀಯ ಸ್ಥಾನ ಚರಿಷ್ಮಾ (ಸರಕಾರಿ ಪ್ರೌಢಶಾಲೆ ಪಾಪೆಮಜಲು)ನಾಲ್ಕನೇ ಸ್ಥಾನ ದೀವಿತ (ಷಣ್ಮುಖ ದೇವ ಪೆರ್ಲಂಪಾಡಿ)ಮತ್ತು 5ನೇ ಸ್ಥಾನ ತನ್ವಿ (ಸರಕಾರಿ ಪ್ರೌಢಶಾಲೆ ಪಾಪೆಮಜಲು),17ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ರಂಜಿತ್ ಎಂ(ಸರಕಾರಿ ಪ್ರೌಢಶಾಲೆ ಪಾಪೆಮಜಲು)ದ್ವಿತೀಯ ಸ್ಥಾನ ಶ್ರವಣ್ ಕುಮಾರ್ (ಸರಕಾರಿ ಪ್ರೌಢಶಾಲೆ ಪಾಪೆಮಜಲು) ತೃತೀಯ ಸ್ಥಾನ ಜಿ ಆರ್ ಯಕ್ಷಿತ್ (ಸುಬೋಧ ಪಾಣಾಜೆ)ನಾಲ್ಕನೇ ಸ್ಥಾನ ಶ್ರೀರಾಮ್ ಶರ್ಮ (ಪ್ರಿಯದರ್ಶಿನಿ ಬೆಟ್ಟಂಪಾಡಿ)5ನೇ ಸ್ಥಾನ ವರ್ಷಿತ್ (ಷಣ್ಮುಖ ದೇವ ಪ್ರೌಢಶಾಲೆ ಪೆರ್ಲಂಪಾಡಿ),14ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ತನ್ವಿ ಎಸ್ ಪಿ (ಷಣ್ಮುಖ ದೇವ ಪ್ರೌಢಶಾಲೆ ಪೆರ್ಲಂಪಾಡಿ) ದ್ವಿತೀಯ ಕೆ ವಿ ಲಾಸ್ಯ (ಸರಕಾರಿ ಪ್ರೌಢಶಾಲೆ ಪಾಪೆ ಮಜಲು)ತೃತೀಯ ಸ್ಥಾನ ವೀಕ್ಷ ಎಂ (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ಲಂಪಾಡಿ) ಚತುರ್ಥ ಸ್ಥಾನ ಯಕ್ಷಿತಾ (ಸರಕಾರಿ ಪ್ರೌಢಶಾಲೆ ಪಾಪೆಮಜಲು)ಐದನೇ ಸ್ಥಾನ ಸ್ಮಿತಾ ವಿ ಎಸ್ (ಸರಕಾರಿ ಪ್ರೌಢಶಾಲೆ ಬೆಟ್ಟಂಪಾಡಿ),14ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಸುಧನ್ವ ಭಟ್ (ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಬೆಟ್ಟಂಪಾಡಿ) ದ್ವಿತೀಯ ಸ್ಥಾನ ದಿವೀಶ್ (ಷಣ್ಮುಖ ದೇವ ಪೆರ್ಲಂಪಾಡಿ) ತೃತೀಯ ಸ್ಥಾನ ಅಭಿಷೇಕ್ (ಸರಕಾರಿ ಪ್ರೌಢಶಾಲೆ ಪಾಪೆಮಜಲು) ನಾಲ್ಕನೇ ಸ್ಥಾನ ಗೌತಮ್ (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರ್ದೆ ಉಪ್ಪಳಿಗೆ) 5ನೇ ಸ್ಥಾನ ಶ್ರೀನಿಧಿ (ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಲ) ಇವರು ವಿಜಯಿಗಳಾಗಿ ಮುಂದೆ ವಿದ್ಯಾರಶ್ಮಿ ಸವಣೂರು ಇಲ್ಲಿ ನಡೆಯಲಿರುವ ತಾಲೂಕು ಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ವೇದಿಕೆಯಲ್ಲಿ ಕ್ರೀಡಾನೋಡೆಲ್ ಅಧಿಕಾರಿ ಸುಧೀರ್, ಹರಿಪ್ರಸಾದ್ ಶಿಕ್ಷಕರು ಪಾಪೆಮಜಲು, ಚಂದ್ರಕಲಾ ದೈಹಿಕ ಶಿಕ್ಷಣ ಶಿಕ್ಷಕಿ ಬೆಟ್ಟಂಪಾಡಿ, ವಾಣಿಶ್ರೀ ದೈಹಿಕ ಶಿಕ್ಷಣ ಶಿಕ್ಷಕಿ ಇರ್ದೆ, ಕಿರಣ್ ರಾಜ್ ಶಿಕ್ಷಕರು ಪಾಪೆಮಜಲು,ಶಾಲಾ ಮುಖ್ಯ ಶಿಕ್ಷಕಿಯರಾದ ಸೌಮ್ಯ ಎ ಮತ್ತು ಲತಾ ಡಿ ಕೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅನುಶ್ರೀ ಸ್ವಾಗತಿಸಿ ,ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಿಕ್ಷಕಿ ಪವಿತ್ರ ವಂದಿಸಿದರು. ಶಿಕ್ಷಕಿಯರಾದ ಧನಲಕ್ಷ್ಮಿ ಟಿ ರೈ ಮತ್ತು ಸೌಮ್ಯ ಎಂ ಕಾರ್ಯಕ್ರಮ ನಿರೂಪಿಸಿದರು.