





ಪುತ್ತೂರು : ವೀರಮಂಗಲ ಪಿಎಂಶ್ರೀ ಶಾಲಾ ವಾರ್ಷಿಕೋತ್ಸವ ನ. 15 ರಂದು ಜರಗಿತು. ಪೂರ್ವಾಹ್ನ ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ ಇವರು ಧ್ವಜಾರೋಹಣಗೈದು ದೀಪ ಬೆಳಗಿಸಿ ಉದ್ಘಾಟಿಸಿದರು.


ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಶಿಕ್ಷಣ ಸಂಯೋಜಕ ಹರಿಪ್ರಸಾದ್ ಉಪಸ್ಥಿತರಿದ್ದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ನರಿಮೊಗರು ಗ್ರಾಮ ಪಂಚಾಯತ್ ಸದಸ್ಯರಾದ ಬಾಬು ಶೆಟ್ಟಿ, ವಸಂತಿ, ಪದ್ಮಾವತಿ, ಉದ್ಯಮಿ ದಾಮೋದರ ಕುಲಾಲ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ಎಸ್ ವೀರಮಂಗಲ, ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ ಉಪಸ್ಥಿತರಿದ್ದರು. ಶಾಲೆಗೆ ಚಯರ್ ಕೊಡುಗೆ ನೀಡಿದ ದಾಮೋದರ್ ಕುಲಾಲ್ ಇವರನ್ನು ಗೌರವಿಸಲಾಯಿತು.






ಸಾಧಕರಿಗೆ ಸನ್ಮಾನ
ಪುತ್ತೂರು ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ನವೀನ್ ಭಂಡಾರಿ ಇವರು ಅತ್ಯುತ್ತಮ ಎಸ್ ಡಿ ಎಂ ಸಿ ಯೆಂದು ಪ್ರಶಸ್ತಿಯನ್ನು ಶಾಲಾರ್ಪಣೆ ಮಾಡಿದರು. ಎಸ್ ಡಿ ಎಂ ಸಿಯ ಅಧ್ಯಕ್ಷರವಿಚಂದ್ರ ಇವರನ್ನು ಸನ್ಮಾನಿಸಿದರು. ಎಸ್ ಡಿ ಎಂ ಸಿಯ ಸರ್ವ ಸದಸ್ಯರನ್ನು ಗೌರವಿಸಿದರು. ಅತ್ಯುತ್ತಮ ಪಿಎಂಶ್ರೀ ಶಾಲೆಯೆಂದು ಪ್ರಶಸ್ತಿ ಪಡೆದು ಈಗಾಗಲೆ ದೇಶಾರ್ಪಣೆಗೊಳ್ಳಲು ಕಾರಣರಾದ ಹಾಗೂ ಜಿಲ್ಲಾ ಅತ್ಯುತ್ತಮ ಮುಖ್ಯಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಮುಖ್ಯಗುರು ತಾರಾನಾಥ ಸವಣೂರು ಇವರನ್ನು ಸನ್ಮಾನಿಸಿದರು.ಶಾಲೆಯ ಕೆಲಸ ಕಾರ್ಯಗಳನ್ನು ಅತ್ಯಂತ ಬದ್ಧತೆಯಿಂದ ಮಾಡುತ್ತಿರುವ ಶಾಲಾ ಶಿಕ್ಷಕರನ್ನು, ಎಲ್ ಕೆ ಜೆ ಶಿಕ್ಷಕರನ್ನು, ಅಡುಗೆ ಸಿಬ್ಬಂದಿಗಳನ್ನು, ಪಿಎಂಶ್ರೀ ಯೋಜನೆಯ ಯೋಗ,ಕರಾಟೆ,ಕಂಪ್ಯೂಟರ್,ಇಂಗ್ಲಿಷ್ ಶಿಕ್ಷಕರನ್ನು ಶಾಲು ಹೊದಿಸಿ ಗೌರವಿಸಿದರು.
ಶಾಲೆಗೆ ವಿವಿಧ ರೀತಿಯ ದಾನ ಮಾಡಿದ ಮಹನೀಯರನ್ನು ಗೌರವಿಸಲಾಯಿತು. ಶಾಲಾ ಮುಖ್ಯಗುರು ತಾರಾನಾಥ ಸವಣೂರು ಸ್ವಾಗತಿಸಿದರು. ಶಿಕ್ಷಕಿಯರಾದ ಶೋಭಾ,ಕವಿತಾ ಹೇಮಾ,ಸವಿತಾ,ಸಂಚನಾ, ಬಹುಮಾನ ಪಟ್ಟಿ ವಾಚಿಸಿದರು. ಹರಿಣಾಕ್ಷಿ, ಕವಿತಾ, ಹಿಮತ್,ಚೈತ್ರಾ, ಕುಬ್ರಾ ಸಹಕರಿಸಿದರು. ಶ್ರೀಲತಾ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ಎಸ್ ವೀರಮಂಗಲ, ಶಾಲಾ ಶಿಕ್ಷಕಿ ಶಿಲ್ಪರಾಣಿ, ಕಾರ್ಯಕ್ರಮ ನಿರೂಪಿಸಿದರು . ಶಿಕ್ಷಕಿ ಸೌಮ್ಯ ವಂದಿಸಿದರು. ಆ ಬಳಿಕ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.








