ಆ.9:ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯಿಂದ ಅಕ್ಷಯಡ್ ಆಟಿಡೊಂಜಿ ಗೌಜಿ

0

ಪುತ್ತೂರು: ಸಂಪ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಲಲಿತಾ ಕಲಾ ಸಂಘ, ಐಕ್ಯೂಎಸಿ ಆಶ್ರಯದಲ್ಲಿ ತುಳುನಾಡಿನ ರುಚಿಕರ ಭಕ್ಷ್ಯವನ್ನೊಳಗೊಂಡ ಅಕ್ಷಯಡ್ ಆಟಿಡೊಂಜಿ ಗೌಜಿ ಕಾರ್ಯಕ್ರಮವು ಆ.9 ರಂದು ಅಕ್ಷಯ ಕಾಲೇಜಿನ ಸಭಾಂಗಣದಲ್ಲಿ ಜರಗಲಿದೆ.


ಪುರುಷರಕಟ್ಟೆ ಸರಸ್ವತಿ‌ ವಿದ್ಯಾಮಂದಿರದ ಅಧ್ಯಕ್ಷ ಅವಿನಾಶ್ ಕೊಡಂಕಿರಿರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಕ್ಷಯ ಕಾಲೇಜಿನ ಚೇರ್ಮನ್ ಜಯಂತ್ ನಡುಬೈಲುರವರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ಹಾಗೂ ತುಳು ಲಿಪಿ ಉಪನ್ಯಾಸಕಿ ಶ್ರೀಶವಾಸವಿ ತುಳುನಾಡುರವರು ಆಟಿದ ಸಂದೇಶ ನೀಡಲಿದ್ದಾರೆ. ಅತಿಥಿಗಳಾಗಿ ಹಿರಿಯ ದೈವ ನರ್ತಕ ಕರಿಯ ಅಜಿಲ ಕಡ್ಯ, ನಾಟಿ ವೈದ್ಯ ನಾರ್ಣಪ್ಪ ಸಾಲಿಯಾನ್ ಮರಕ್ಕೂರು, ದೈವ ಚಾಕರಿ ಮಾಧವ ಮಡಿವಾಲ ನಡುಬೈಲುರವರು ಭಾಗವಹಿಸಲಿದ್ದಾರೆ ಎಂದು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್, ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಅಕ್ಷಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ, ಉಪ ಪ್ರಾಂಶುಪಾಲ ರಕ್ಷಣ್ ಟಿ.ಆರ್, ಐಕ್ಯೂಎಸಿ ಸಂಯೋಜಕಿ ರಶ್ಮಿ ಕೆ, ಲಲಿತಾ ಕಲಾ ಸಂಘದ ಸಂಯೋಜಕಿ ಪ್ರಭಾವತಿ ಕೆ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here