ಪುತ್ತೂರು: ತಾಲೂಕು ಯುವ ಜನ ಇಲಾಖೆ ಪ್ರಶಸ್ತಿ ಪುರಸ್ಕೃತ ಶ್ರೀ ಕೃಷ್ಣ ಯುವಕ ಮಂಡಲ (ರಿ) ಸಿಟಿಗುಡ್ಡೆ ಪುತ್ತೂರು, ಹೊಸಬೆಳಕು ಬಡವರ ಆಶಾಕಿರಣ ಆರ್ಲಪದವು (ರಿ) ಪುತ್ತೂರು, ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಇದರ ವತಿಯಿಂದ ಕಡಬ ತಾಲೂಕು ಐತ್ತೂರು ಗ್ರಾಮದ ಶಿವಾಜಿನಗರದ ಅಪ್ಪಣ್ಣ ದಾಸಯ್ಯ ಹಾಗೂ ಮೀನಾಕ್ಷಿ ಇವರ ಮಗಳು ಹಾಗೂ ಸುಳ್ಯ ತಾಲೂಕಿನ ಅರಂತೋಡು ಮನೆಯ ರಾಧಾಕೃಷ್ಣ ದಾಸಯ್ಯ ರವರ ಪತ್ನಿ ಲಲಿತಾ ದಾಸ್ ರವರಿಗೆ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.
ಇವರು ಮರ್ಧಾಳ ಅಂಗನವಾಡಿ ಸಹಾಯಕಿಯಾಗಿ 35ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಮುಖ್ಯ ಅತಿಥಿಯಾಗಿ ಡಾ.ರಾಜ್ ಕುಮಾರ್ ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿಕ್ಷಕಿ ಶಾಂತಾ ಪುತ್ತೂರು ಸನ್ಮಾನ ಪತ್ರ ವಾಚಿಸಿ ಶುಭ ಹಾರೈಸಿದರು. ಮತ್ತೋರ್ವ ಅತಿಥಿ ನಿವೃತ್ತ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಕಾಟುಕುಕ್ಕೆ ಅಭಿನಂದನಾ ನುಡಿಗಳನ್ನಾಡಿದರು. ಲಲಿತಾರವರ ಮನೆಯವರು ಉಪಸ್ಥಿತರಿದ್ದರು. ಸಮಾಜ ಸೇವಕ ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ನ ನವೀನ್ ಸಿಟಿಗುಡ್ಡೆ ಪುತ್ತೂರು ಸ್ವಾಗತಿಸಿದರು. ಕಲಾವಿದ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು. ರಕ್ತಸಂಜೀವಿನಿ ಬ್ಲಡ್ ಗ್ರೂಪ್ ನ ಸದಸ್ಯ ಮನೋಹರ ಸಹಕರಿಸಿದರು. ಲಲಿತಾರವರ ಸೊಸೆ ರಶ್ಮಿ ಧನ್ಯವಾದವಿತ್ತರು.