





ಪುತ್ತೂರು: ಸಿಟಿ ಫ್ರೆಂಡ್ಸ್ ಆರ್ಟ್ಸ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ನಗರ ಪೊಲೀಸ್ ಠಾಣೆ ಪುತ್ತೂರು, ಸಂಚಾರಿ ಪೊಲೀಸ್ ಠಾಣೆ ಪುತ್ತೂರು ಇವುಗಳ ಆಶ್ರಯದಲ್ಲಿ ನನ್ನ ಜೀವ ನನ್ನ ರಕ್ಷಣೆ “ಸೇವ್ ಲೈಫ್” ಎಂಬ ಧ್ಯೇಯ ವಾಕ್ಯದಡಿಯಲ್ಲಿ ಮಾದಕ ದ್ರವ್ಯ ಪುತ್ತೂರು ಮತ್ತು ಸಂಚಾರಿ ನಿಯಮಗಳ ಜನ ಜಾಗೃತಿ ಕಾರ್ಯಕ್ರಮ ಆ.15ರಂದು ಸ್ವಾತಂತ್ರ್ಯೋತ್ಸವದ ಅಂಗವಾಗಿ ಪುತ್ತೂರಿನ ಗಾಂಧಿ ಕಟ್ಟೆ ಬಳಿ ಸಂಜೆ ಜರಗಲಿದೆ. ಈ ಸಂದರ್ಭದಲ್ಲಿ ಮಾಯಿದೆ ದೇವುಸ್ ಚರ್ಚ್ ವಠಾರದಿಂದ ಗಾಂಧಿ ಕಟ್ಟೆ ತನಕ ಧ್ವಜ ನಡಿಗೆ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











