ಸಜಂಕಾಡಿ ಶಾಲೆಯಲ್ಲಿ ಸಮಗ್ರ ಶಿಕ್ಷಣ ಅಭಿಯಾನ ಯೋಜನೆಯ ಸಾಮಾಜಿಕ ಪರಿಶೋಧನೆ -ಪೋಷಕರ ಸಭೆ

0

ಪುತ್ತೂರು: ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಸಜಂಕಾಡಿಯಲ್ಲಿ ಸಮಗ್ರ ಶಿಕ್ಷಣ ಅಭಿಯಾನ ಯೋಜನೆಯ ಸಾಮಾಜಿಕ ಪರಿಶೋಧನಾ ಸಭೆಯು ಇತ್ತೀಚೆಗೆ ನಡೆಯಿತು.

ಶಾಲಾ‌ ಎಸ್.ಡಿ.ಎಂ.ಸಿ‌ ಅಧ್ಯಕ್ಷೆ ಯಶೋಧ ಅಧ್ಯಕ್ಷತೆ ವಹಿಸಿದ್ದರು .ಸಹಾಯಕ ನಿರ್ದೇಶಕಿ ಸಮಾಜ ಕಲ್ಯಾಣ ಇಲಾಖೆಯ ಪರವಾಗಿ ಪ್ರೇಮಲತಾ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.ಸಂಪನ್ಮೂಲ ವ್ಯಕ್ತಿ, ಕಾರ್ಯಕ್ರಮ‌ ವ್ಯವಸ್ಥಾಪಕಿ ಸೌಮ್ಯ ಅಪ್ಪಣ್ಣ ನಾಯ್ಕ ಶಾಲಾ ಮಕ್ಕಳ ಕಲಿಕೆಗೆ ಪೂರಕವಾಗುವಂತಹ ವಾತಾವರಣ ,ಶಾಲೆಯಲ್ಲಿ ಮಕ್ಕಳ ಸುರಕ್ಷತೆ ,ಶಾಲೆಯ ಅಭಿವೃದ್ಧಿಗಾಗಿ ಪೋಷಕರು ಮಾಡಬೇಕಾದ ಕರ್ತವ್ಯ ,ಹಾಗೂ ಶಿಕ್ಷಣದ ಗುಣಮಟ್ಟದ ಸುಧಾರಣೆಗಾಗಿ ಸರಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯ ಕುಮಾರ್ ಕೆ,ಸಾಮಾಜಿಕ‌ ಪರಿಶೋಧನಾ ಸಮಿತಿಯ ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಚಂಚಲ ಕುಮಾರಿ ಬಿ ,ಹೇಮಲತಾ ,ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಇಬ್ರಾಹಿಂ ,ಪ್ರಭಾರ ಮುಖ್ಯಗುರು ಸುಮಲತಾ ಪಿ.ಕೆ ,ಎಸ್ .ಡಿ.ಎಂ.ಸಿ ಸದಸ್ಯರು ,ಶಿಕ್ಷಕರು ,ಪೋಷಕರು ಉಪಸ್ಥಿತರಿದ್ದರು .ಶಾಲಾ ಪ್ರಭಾರ ಮುಖ್ಯಗುರು ಸುಮಲತಾ ಪಿ.ಕೆ ಸ್ವಾಗತಿಸಿದರು.ಶಿಕ್ಷಕ ಗಣೇಶ ನಾಯಕ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here