ಪುತ್ತೂರು: ಸವಣೂರು ಅಂಗನವಾಡಿಯ ಬಾಲವಿಕಾಸ ಸಮಿತಿ ಸಭೆಯು ಅಂಗನವಾಡಿಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಜ್ಯೋತಿ ಚೇತನ್ ಗೌಡ ಬೇರಿಕೆಯವರನ್ನು ಆಯ್ಕೆ ಮಾಡಲಾಯಿತು.
ಸದಸ್ಯಗಳಾಗಿ ಪಾರ್ವತಿ, ಚೇತನ್ ಕುಮಾರ್ ಕೋಡಿಬೈಲು, ಅಸ್ಮಾ, ಸುರೇಖಾ, ಪಾರ್ವತಿ, ಆಶಾ ಕಾರ್ಯಕರ್ತೆ ಅನಿತಾ ಅನನ್ಯ, ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಸತೀಶ್ ಬಲ್ಯಾಯ ಅಂಗನವಾಡಿ ಕಾರ್ಯಕರ್ತೆ ಹರ್ಷಿತಾ ವೈ ಆಯ್ಕೆಯಾದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ನವ್ಯಶ್ರೀ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಾವತಿ ಸುಣ್ಣಾಜೆ ಶಾಲಾ ಮುಖ್ಯಗುರು ನಿಂಗರಾಜು ಕೆ.ಪಿ., ಸಂಘ ಸಂಸ್ಥೆ ಪ್ರತಿನಿಧಿ ಸತೀಶ್ ಬಲ್ಯಾಯ ಹಾಗೂ ಮಕ್ಕಳ ತಾಯಂದಿರು ಪೋಷಕರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಹರ್ಷಿತಾ ಸ್ವಾಗತಿಸಿ ಸಹಾಯಕಿ ಗಂಗಮ್ಮ ವಂದಿಸಿದರು.