ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಮತ್ತು ಲಿಯೋ ಕ್ಲಬ್ ನಿಯೋಸ್ ಅಕ್ಷಯನ್ಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ವರ್ಷದ ಎಸಲ್ ಆಟಿದ ಕುಸಲ್ ಕಾರ್ಯಕ್ರಮ ವಿದ್ಯಾಮಾತ ಅಕಾಡೆಮಿಯಲ್ಲಿ ನಡೆಯಿತು.
ಲಯನ್ ಕಾವು ಹೇಮನಾಥ ಶೆಟ್ಟಿ mjf ತೆಂಗಿನ ಕೊಂಬು ಅರಳಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಹಿತಿ, ಕರ್ನಾಟಕ ತುಳು ಅಕಾಡೆಮಿ ಪುರಸ್ಕೃತ ರಮೇಶ್ ಉಳಯ ಆಟಿಯ ಮಹತ್ವದ ಕುರಿತು ತಿಳಿಸಿದರು.
ಮುಖ್ಯ ಅತಿಥಿ ಲಯನ್ ಸುದರ್ಶನ ಪಡಿಯಾರ್ mjf ನೂತನ ಸದಸ್ಯೆ ಶುಭ ರೈ ಅವರನ್ನು ಕ್ಲಬ್ಬಿಗೆ ಸೇರ್ಪಡೆಗೊಳಿಸಿ ಪ್ರಮಾಣವಚನ ಬೋಧಿಸಿ ಪುತ್ತೂರ್ದ ಮುತ್ತು ಕ್ಲಬ್ಬಿಗೆ ನನ್ನ ಸಂಪೂರ್ಣ ಸಹಕಾರ ಇದೆ ಎಂದರು. ಲಯನ್ ಅನಿತಾ ಹೇಮನಾಥ ಶೆಟ್ಟಿ ಸದಸ್ಯತ್ವ ಪಿನ್ನನ್ನು ತೊಡಿಸಿದರು. ಪ್ರಾಂತೀಯ ಅಧ್ಯಕ್ಷ ಆನಂದ ರೈ ಯವರು ಕ್ಲಬ್ಬಿನ ಅಭಿವೃದ್ಧಿಯ ಬಗ್ಗೆ ತಿಳಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ಲಯನ್ ವೇದಾವತಿ ಎಲ್ಲರೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದರು.

ವೇದಿಕೆಯಲ್ಲಿ ಐಪಿಪಿ ರವೀಂದ್ರ ಪೈ, ಕಾರ್ಯದರ್ಶಿ ಅನಸೂಯ ಬಾಯಿ, ಖಜಾಂಚಿ ಸುಪ್ರೀತ್, ಲಿಯೋ ಅಧ್ಯಕ್ಷ ಚಿಂತನ್ ಸಾಲಿಯಾನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗೈಡಿಂಗ್ ಲಯನ್ ಗಣೇಶ್ ಶೆಟ್ಟಿ, ಡಾಕ್ಟರ್ ರಂಜಿತಾ ಶೆಟ್ಟಿ, ದಿವ್ಯನಾಥ ಶೆಟ್ಟಿ, ವಿವಿಧ ಕ್ಲಬ್ ಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಜೂನಿಯರ್ ಇಂಜಿನಿಯರ್ ರಮೇಶ್, ತುಳು ಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್, ನರಿಮೊಗರು ವ್ಯವಸಾಯ ಸೇವಾ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ನವೀನ್, ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಕಣ್ಣರಾಯ, ಪುತ್ತೂರ್ದ ಮುತ್ತು ಕ್ಲಬ್ಬಿನ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಮೇಶ್ ಉಳಯ ಮತ್ತು ಅತ್ಯುತ್ತಮ ಕಾರ್ಯದರ್ಶಿ ಪ್ರಶಸ್ತಿ ಪಡೆದ ವತ್ಸಲ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಆಟಿಯ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಲಯನ್ ದಯಾನಂದರ ರೈ ಪ್ರಾರ್ಥಿಸಿದರು. ವತ್ಸಲ ಶೆಟ್ಟಿ ಧ್ವಜ ವಂದನೆ ಮಾಡಿದರು. ಪ್ರತಿಮಾ ರೈ ಸನ್ಮಾನಿತರ ಪರಿಚಯ ಮಾಡಿದರು. ಕಾರ್ಯಕ್ರಮದ ಸಂಯೋಜನೆಯನ್ನು ಲಯನ್ ಭಾಗ್ಯೇಶ್ ರೈ ಮತ್ತು ಲಯನ್ ರಂಜಿನಿ ಶೆಟ್ಟಿ ನಿರ್ವಹಿಸಿದರು. ಕ್ಲಬ್ಬಿನ ಅಧ್ಯಕ್ಷೆ ಲಯನ್ ವೇದಾವತಿ ರಾಜೇಶ್ mjf ಸಹಕರಿಸಿದರು. ಲಯನ್ ಸುಪ್ರೀತ್ ಸ್ವಾಗತಿಸಿ, ಲಯನ್ ಅನಸೂಯ ಬಾಯಿ ವಂದಿಸಿದರು.