ಆಲಂಕಾರು:ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಾಡಿಕೊಪ್ಪದಲ್ಲಿ 79 ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಲತಾ ಶರವೂರು ಧ್ವಜಾರೋಹಣ ನೆರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೋದ್ ಕುಮಾರ್ ಕೊಂಡಾಡಿ ಕೊಪ್ಪ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹರೀಶ್ ಏಂತಡ್ಕ ಅಂಗನವಾಡಿ ಕಾರ್ಯಕರ್ತೆ ಹರಿಣಾಕ್ಷಿ, ಸವಣೂರು ಕ್ಲಸ್ಟರ್ ಸಿ.ಆರ್.ಪಿ ಜಯಂತ್ ವೈ ಉಪಸ್ಥಿತರಿದ್ದರು.ಶಾಲಾಭಿವೃದ್ಧಿ ಸದಸ್ಯರಾದ ವಾಸಪ್ಪಕುಂಬಾರ ವೇದಾವತಿ ರೇವತಿ ನಾಡ್ತಿಲ ಗೀತಾ ಕೆ ಪ್ರೇಮಾವತಿ ಕೊಂಡಾಡಿಕೊಪ್ಪ ಅನುಷಾ ಪ್ರೇಮ ಸುನೀತಾ ಆಶಾ ರಜನಿ ಡಿ ವಿಜಯಾ ಮಮತಾ ರತ್ನಾವತಿ ನಿತ್ಯಾನಂದ ಕುಂಬಾರ ನಾಡ್ತಿಲ ಚಿತ್ರಾ ನಾಡ್ತಿಲ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಮೋಕ್ಷಿತಾ ಕೊಂಡಾಡಿ ಕೊಪ್ಪ ಶಾಲಾ ಪೋಷಕರಾದ ನೋಣಯ್ಯ ಗೌಡ ಆನಂದ ಕುಂಬಾರ ಕೊಂಡಾಡಿ ಕೊಪ್ಪ ಏಂತಡ್ಕ ಉಪಸ್ಥಿತರಿದ್ದರು.ಶಾಲಾ ಶಿಕ್ಷಕರಾದ ಸೌಮ್ಯ ಸ್ವಾಗತಿಸಿ ದಿವ್ಯಾ ವಿ ವಂದಿಸಿದರು.ಬಳಿಕ ಶಾಲಾ ಮಕ್ಕಳಿಂದ ಸ್ವಾತಂತ್ರ್ಯೋತ್ಸವದ ಮೆರವಣಿಗೆ ನಡೆಯಿತು.