ಪುತ್ತೂರು: ನೆಹರುನಗರ ಅಂಗನವಾಡಿ ಕೇಂದ್ರದಲ್ಲಿ ಧ್ವಜಾರೋಹಣವನ್ನು ನಗರಸಭಾ ಸದಸ್ಯ ದಿನೇಶ್ ಗೌಡರವರು ನೆರೆವೇರಿಸಿದರು. ಬಾಲವಿಕಾಸ ಸಮಿತಿ ಅಧ್ಯಕ್ಷೆ ವಿದ್ಯಾ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ, ಕಾರ್ಯದರ್ಶಿ ವಿನೋದ್ ಕಲ್ಲೇಗರವರು ಪಾಲ್ಗೊಂಡಿದ್ದರು. ಡಿಪ್ಲೋಮ ಕಾಲೇಜಿನ ಉಪನ್ಯಾಸಕ ವರುಣ್ ಕುಮಾರ್, ಒಕ್ಕಲಿಗ ಸೊಸೈಟಿ ನಿರ್ದೇಶಕರಾದ ರಾಧಾಕೃಷ್ಣ ಗೌಡ, ವಿನೋದ್ ಆಚಾರ್ಯ, ಶಂಕರ್, ಜಯಂತ್ ಸಪಲ್ಯ ಶಹರಿ ರೋಜಗಾರ್ ಯೋಜನೆಯ ಸರ್ವ ಸದಸ್ಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆಯರು ಸ್ವಾಗತಿಸಿ ವಂದಿಸಿದರು.