ದ.ಕ.ಜಿಲ್ಲಾ ಕೃಷಿ ಕಾರ್ಮಿಕರ ಸಹಕಾರಿ ಸಂಘದ ನೂತನ ಸಾಲಿನ ಅಧ್ಯಕ್ಷರಾಗಿ ಇ.ಎಸ್ ವಾಸುದೇವ ಇಡ್ಯಾಡಿ, ಉಪಾಧ್ಯಕ್ಷರಾಗಿ ಡಿ ಚೆನ್ನಪ್ಪ ಗೌಡ ನೆಲ್ಯಾಡಿ

0

ಪುತ್ತೂರು : ಇಲ್ಲಿನ ಏಳ್ಮುಡಿ ಭಟ್ ಬಿಲ್ಡಿಂಗ್ ನಲ್ಲಿ ಪ್ರಧಾನ ಕಛೇರಿ ಹೊಂದಿ , ಕಳೆದ 5 ವರ್ಷಗಳಿಂದ ವ್ಯವಹರಿಸುತ್ತಿರುವ ದ.ಕ.ಜಿಲ್ಲಾ ಕೃಷಿ ಕಾರ್ಮಿಕರ ಸಹಕಾರಿ ಸಂಘ ನಿಯಮಿತ ಇದರ 2025-26 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ಸಂಘದ ಸಭಾಂಗಣದಲ್ಲಿ ನಡೆಯಿತು.


ಸಂಘದ ನೂತನ ಸಾಲಿನ ಅಧ್ಯಕ್ಷರಾಗಿ ಇ ಎಸ್ ವಾಸುದೇವ ಇಡ್ಯಾಡಿ , ಉಪಾದ್ಯಕ್ಷರಾಗಿ ಡಿ ಚೆನ್ನಪ್ಪ ಗೌಡ ನೆಲ್ಯಾಡಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಿರ್ದೇಶಕರುಗಳಾಗಿ ಎ.ರವೀಂದ್ರನಾಥ ಕಲ್ಲೂರಾಯ ,ರಾಜು ಹೊಸ್ಮಠ , ಕೆ ಗಣೇಶ್ ಹೆಗ್ಡೆ , ಗಂಗಾಧರ್ ನಾಯ್ಕ , ರಾಮ ಆಚಾರ್ಯ , ಚಂದ್ರಹಾಸ ರೈ , ಟಿ.ಸುಂದರ ನಾಯ್ಕ , ಕೇಶವ ಸುವರ್ಣ ಪಿ , ಫಾತಿಮ ಸಂಜಯನಗರ , ಲತಾ ಆನಂದ ಸಂಜಯನಗರ , ಮಹಾವೀರ ಜೈನ್ ಹಾಗೂ ಹರ್ಷೇಂದ್ರ ಕುಮಾರ್ ಜೈನ್ ಕಜೆಕಾರ್ ಮತ್ತು ಜಗದೀಶ್ ಶೆಟ್ಟಿ ಇವರುಗಳು ಆಯ್ಕೆಯಾಗಿದ್ದಾರೆ. ಮಾಜಿ ಅಧ್ಯಕ್ಷೆ ಸುಮತಿ ಹೆಗ್ಡೆ ನೂತನ ಸಾಲಿನ ಪದಾಧಿಕಾರಿಗಳನ್ನು ಅಭಿನಂದಿಸಿ ,ಹಾರೈಸಿದರು.


ಸಹಕಾರಿ ಸಂಘಗಳ ಲೆಕ್ಕ ಪರಿಶೋಧಕ ಉಪನಿರ್ದೇಶಕರ ಕಛೇರಿ ಮಂಗಳೂರು ಇದರ ಪ್ರಥಮ ದರ್ಜೆ ಸಹಾಯಕ ನವೀನ್ ಕುಮಾರ್ ಎಂ ಎಸ್ ಚುನಾವಣಾ ಅಧಿಕಾರಿಯಾಗಿ ಪಾಲ್ಗೊಂಡಿದ್ದರು. ಸಂಸ್ಥೆಯ ಸಿಬಂದಿಗಳು ಸಹಕಾರ ನೀಡಿದರು.

LEAVE A REPLY

Please enter your comment!
Please enter your name here