ಪುತ್ತೂರು: ನಮ್ಮೂರು ನಮ್ಮವರು ಮೈಂದಡ್ಕ 34 ನೆಕ್ಕಿಲಾಡಿ ವತಿಯಿಂದ ನೆಕ್ಕಿಲಾಡಿಯ ಮೈಂದಡ್ಕ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಸಲಾಯಿತು.
ನಿವೃತ್ತ ಬಿ ಎಸ್ ಎನ್ ಎಲ್ ಉದ್ಯೋಗಿ ಸೇಸಪ್ಪ ನಾಯ್ಕ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಜಾನ್ ಕೆನ್ಯೂಟ್ , ಗ್ರಾ.ಪಂ.ಅಧ್ಯಕ್ಷೆ ಸುಜಾತ ರೈ, ಸಂಘಟನೆಯ ಅಧ್ಯಕ್ಷ ಪುರುಷೋತ್ತಮ ನಾಯ್ಕ, ಪದಾಧಿಕಾರಿಗಳು, ಸದಸ್ಯರು, ಊರಿನ ನಾಗರಿಕರು, ಪುಟಾಣಿಗಳು ಉಪಸ್ಥಿತರಿದ್ದು ಧ್ಜಜವಂದನೆ ಸಲ್ಲಿಸಿದರು.
ಪ್ರದೀಪ್ ತಾಳೆಹಿತ್ಲು, ಪ್ರವೀಣ್ ದರ್ಖಾಸು, ಸತೀಶ್ ದರ್ಬೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.