ಪುತ್ತೂರು : “ರಾಸ್ಬೇರಿ ಪೈ ಫೌಂಡೇಶನ್” ಇದರ ವತಿಯಿಂದ ಆಯೋಜಿಸಿರುವ ರಾಷ್ಟ್ರಮಟ್ಟದ ‘ಕೂಲೆಸ್ಟ್ ಪ್ರಾಜೆಕ್ಟ್ಸ್ ಇಂಡಿಯಾ’ ವಿಜ್ಞಾನ ಸಮಾವೇಶಕ್ಕೆ, ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿನಿಯರ ಎರಡು ತಂಡಗಳ ವಿಜ್ಞಾನ ಯೋಜನೆಗಳು ಆಯ್ಕೆಗೊಂಡಿವೆ.
8ನೇ ತರಗತಿಯ ವಿದ್ಯಾರ್ಥಿನಿಯರಾದ ಮೇಧಾ ಭಟ್ ( ಕೃಷ್ಣಮೂರ್ತಿ ಪಟ್ಲ ಮತ್ತು ಶ್ವೇತ ಸರಸ್ವತಿ ಬಂಗಾರಡ್ಕ ದಂಪತಿ ಪುತ್ರಿ), ಪ್ರಣಮ್ಯ ಜೆ (ಜಯಪ್ರಕಾಶ್ ಬಿ ಮತ್ತು ಮಾಧವಿ ಕೆ .ಎ ದಂಪತಿ ಪುತ್ರಿ), ಮಾನ್ವಿ ಕಜೆ ( ಡಾ. ಚರಣ್ ಕಜೆ ಮತ್ತು ರಮ್ಯಾ ಕಜೆ ದಂಪತಿ ಪುತ್ರಿ), ಆರಾಧನಾ ಬಿ.(ಡಾ. ಶ್ರೀ ಪ್ರಕಾಶ್ ಬಿ. ಮತ್ತು ಅರ್ಚನ ಪ್ರಕಾಶ್ ಬಿ. ದಂಪತಿ ಪುತ್ರಿ) ಇವರ ತಂಡ ತಯಾರಿಸಿದ “ಅನ್‌ಸ್ಪೋಕನ್ ಟ್ರುಥ್ಸ್” ಯೋಜನೆ ಹಾಗೂ 9ನೇ ತರಗತಿಯ ಸೃಷ್ಟಿ ಎಂ. ಸಾಲಿಯಾನ್ ( ಮಹೇಶ್ ಪಿ ಮತ್ತು ಸುಜಾತಾ ದಂಪತಿ ಪುತ್ರಿ), ಶ್ರಾವಣಿ ಪಿ.ಎಲ್ ( ಪಿ. ಲೋಕೇಶ್ವರ ರಶ್ಮಿ ಕೆ .ಎಸ್. ದಂಪತಿ ಪುತ್ರಿ) ಮತ್ತು ಶ್ರೀ ರಾಮಕೃಷ್ಣ ಪೌಢ ಶಾಲೆಯ ಮೂವರು ವಿದ್ಯಾರ್ಥಿನಿಯರು ಜೊತೆಗೂಡಿ ತಯಾರಿಸಿದ ” ನೃತ್ಯ ದೀಪ” ವಿಜ್ಞಾನ ಯೋಜನೆಗಳು ಕೂಲೆಸ್ಟ್ ಪ್ರಾಜೆಕ್ಟ್ಸ್ ಇಂಡಿಯಾಕ್ಕೆ ಆಯ್ಕೆಗೊಂಡಿವೆ.
ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್, ಡಿಜಿಟಲ್ ತಂತ್ರಜ್ಞಾನ ಮತ್ತು ಕೌಶಲವನ್ನು ಹೆಚ್ಚಿಸುವ ಉದ್ದೇಶದಿಂದ ರಾಸ್ಬೇರಿ ಪೈ ಫೌಂಡೇಶನ್ “ಕೂಲೆಸ್ಟ್ ಪ್ರಾಜೆಕ್ಟ್ “ ಎಂಬ ಸಮಾವೇಶವನ್ನು, ಸುಮಾರು 41 ವಿವಿಧ ದೇಶಗಳಲ್ಲಿ ಆಯೋಜಿಸುತ್ತಿದೆ. ಈ ವರ್ಷ ನಮ್ಮ ದೇಶದಲ್ಲಿ ಪ್ರಥಮ ಭಾರಿಗೆ, ಇದೇ ಸೆಪ್ಟೆಂಬರ್ 20ರಂದು ಹೈದರಾಬಾದ್‌ನ ವಾರಾಹಿ ಬ್ಯಾಂಕ್ವೆಟ್ ಹಾಲ್‌ನಲ್ಲಿ ಈ ಸಮಾವೇಶ ನಡೆಯಲಿದೆ.
ಮೂಲತಃ ಪುತ್ತೂರಿನವರಾಗಿದ್ದು, ಪ್ರಸ್ತುತ ಅಮೇರಿಕದಲ್ಲಿ ನೆಲೆಸಿರುವ ಶ್ರೀಯುತ ಆನಂದವರ್ಧನ ಇವರು, ಭಾಗವಹಿಸಲು ಆಯ್ಕೆಯಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿರುತ್ತಾರೆ. ಶಾಲಾ ಕಂಪ್ಯೂಟರ್ ಶಿಕ್ಷಕಿ ಹೇಮಾ ಭಟ್ ಇವರ ಮಾರ್ಗದರ್ಶನ ಹಾಗೂ ಶಾಲಾ ಪ್ರಾಂಶುಪಾಲರಾದ ಸಿಂಧು ವಿ.ಜಿ ಇವರ ಪ್ರೋತ್ಸಾಹದಿಂದ ವಿದ್ಯಾರ್ಥಿನಿಯರು ಈ ಸಾಧನೆ ಮಾಡಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.