





ಕಾಣಿಯೂರು: ದೋಳ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.


ದ್ವಜಾರೋಹಣವನ್ನು ನಿವೃತ್ತ ಶಿಕ್ಷಕ ಅಚ್ಚುತ ಗೌಡ ಕೂರೇಲುರವರು ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಎಸ್.ಡಿ. ಎಮ್.ಸಿ ಅಧ್ಯಕ್ಷ ದಯಾನಂದ ಕೂರೇಲು, ಪಂಚಾಯತ್ ಸದಸ್ಯರಾದ ಲೋಕಯ್ಯ ಪರವ, ದೇವಿಪ್ರಸಾದ್ ದೋಲ್ಪಾಡಿ, ಅಂಬಾಕ್ಷಿ ಕೂರೇಲು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕೂರೇಲು, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಧ್ವಜಾರೋಹಣದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.















